Publish Date: Sat, 08 Oct 2022 (08:10 IST)
Updated Date: Sat, 08 Oct 2022 (08:32 IST)
ಬೆಂಗಳೂರು: ಕೆಜಿಎಫ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಆದರೆ ಅವರ ಮುಂದಿನ ಸಿನಿಮಾ ಬಿಗ್ ಬಜೆಟ್ ನದ್ದು ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಮುಂದಿನ ಸಿನಿಮಾವನ್ನು ಯಶ್ ಸಮಯ ಬಂದಾಗ ಘೋಷಣೆ ಮಾಡುವುದಾಗಿ ಹೇಳಿದ್ದರು. ಕೆಜಿಎಫ್ ಸಂದರ್ಭದಲ್ಲಿ ಬಿಟ್ಟಿದ್ದ ಉದ್ದ ದಾಡಿ, ಕೂದಲುಗಳಿಗೆ ಯಶ್ ಇನ್ನೂ ಕತ್ತರಿ ಹಾಕಿಲ್ಲ. ಹೀಗಾಗಿ ಹೊಸ ಸಿನಿಮಾದಲ್ಲೂ ಯಶ್ ಈ ರಗಡ್ ಲುಕ್ ಮುಂದುವರಿಸಲಿದ್ದಾರೆ ಎಂಬುದು ಖಚಿತವಾಗಿದೆ.
ಈಗಾಗಲೇ ವಿದೇಶದಲ್ಲಿ ಯಶ್ ಶೂಟಿಂಗ್, ಕಾರ್ ರೇಸಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಇದು ಹೊಸ ಸಿನಿಮಾಗೆ ತಯಾರಿ ಇರಬಹುದು ಎನ್ನಲಾಗುತ್ತಿದೆ.
-Edited by Rajesh Patil