Publish Date: Fri, 08 Jan 2021 (08:44 IST)
Updated Date: Fri, 08 Jan 2021 (08:46 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ರಾಕಿಂಗ್ ಸ್ಟಾರ್ ಮುದ್ದಿನ ಮಡದಿ ನಟಿ ರಾಧಿಕಾ ಪಂಡಿತ್ ಬರ್ತ್ ಡೇ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೊರೋನಾ ಹಿನ್ನಲೆಯಲ್ಲಿ ಈ ಬಾರಿ ಯಶ್ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಕುಟುಂಬದವರೊಂದಿಗೆ ಮಧ್ಯರಾತ್ರಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ರಾಧಿಕಾ ಮತ್ತು ಯಶ್ ಮುಖದ ತುಂಬಾ ಕೇಕ್ ಮೆತ್ತಿಕೊಂಡು ಸಂಭ್ರಮಿಸಿದ ಗಳಿಗೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹ್ಯಾಪೀ ಬರ್ತ್ ಡೇ ಬೆಸ್ಟೀ ಎಂದು ಬರೆದುಕೊಂಡಿದ್ದಾರೆ.