Publish Date: Thu, 07 Jan 2021 (17:02 IST)
Updated Date: Thu, 07 Jan 2021 (17:04 IST)
ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಯುವರಾಜ್ ನೀಡಿದ ಹೇಳಿಕೆಯನ್ವಯ ರಾಧಿಕಾ ಕುಮಾರಸ್ವಾಮಿಗೆ ವಿಚಾರಣೆಗೆ ಹಾಜರಾಗಲು ಶೀಘ್ರದಲ್ಲೇ ಸಿಸಿಬಿ ನೋಟಿಸ್ ನೀಡುವ ಸಾಧ‍್ಯತೆಯಿದೆ.
ರಾಧಿಕಾ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾಯಿಸಿರುವುದನ್ನು ಯುವರಾಜ್ ಬಾಯ್ಬಿಟ್ಟಿದ್ದ. ರಾಧಿಕಾ ಕೂಡಾ ಇದಕ್ಕೆ ಸ್ಪಷ್ಟನೆ ನೀಡಿದ್ದರು. ಆದರೆ ರಾಧಿಕಾ ಅಣ್ಣ ರವಿರಾಜ್ ಬೇನಾಮಿ ಹಣಕಾಸಿನ ವ್ಯವಹಾರ ನಡೆಸುತ್ತಿರುವುದು ಸಿಸಿಬಿ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಅವರನ್ನು ವಿಚಾರಣೆ ಮಾಡಲಾಗಿದೆ. ಇನ್ನೀಗ ರಾಧಿಕಾಗೂ ಸಿಸಿಬಿ ಬುಲಾವ್ ನೀಡುವ ಸಾಧ‍್ಯತೆಯಿದೆ.