Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ: ಯಶ್ ಗೆ ಈಗ ಎಷ್ಟು ವರ್ಷ?

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ: ಯಶ್ ಗೆ ಈಗ ಎಷ್ಟು ವರ್ಷ?
ಬೆಂಗಳೂರು , ಭಾನುವಾರ, 8 ಜನವರಿ 2023 (08:50 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ಕೆಜಿಎಫ್ ಸ್ಟಾರ್ ಈಗ ನ್ಯಾಷನಲ್ ಲೆವೆಲ್ ಸ್ಟಾರ್ ಆಗಿರುವುದರಿಂದ ರಾಕಿಂಗ್ ಹಬ್ಬ ಜೋರಾಗಿಯೇ ಇದೆ.

ನಿರಾಸೆಯೆಂದರೆ ಯಶ್ ಈ ಬಾರಿಯೂ ತಮ್ಮ ಹೊಸ ಸಿನಿಮಾ ಘೋಷಣೆ ಮಾಡುತ್ತಿಲ್ಲ. ಜೊತೆಗೆ ಅಭಿಮಾನಿಗಳ ಜೊತೆಯೂ ಈ ದಿನ ಕಳೆಯುತ್ತಿಲ್ಲ. ಹಾಗಿದ್ದರೂ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕವೇ ತಮ್ಮ ನೆಚ್ಚಿನ ನಟನಿಗೆ ಶುಭ ಕೋರುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಈಗ 37 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1986 ರ ಜನವರಿ 8 ರಂದು ಹಾಸನದ ಬೂವನಹಳ್ಳಿಯಲ್ಲಿ ಯಶ್ ಜನಿಸಿದ್ದರು. ಅವರ ಜನ್ಮ ನಾಮ ನವೀನ್ ಕುಮಾರ್ ಗೌಡ. ಅದಲ್ಲದೆ ಯಶ್ವಂತ್ ಎಂಬ ಹೆಸರೂ ಅವರಿಗಿದೆ. ಸಿನಿಮಾಗೆ ಬಂದಾಗ ಯಶ್ ಎಂದು ಹೆಸರು ಬದಲಾಯಿತು. ಇಂದು ರಾಕಿಂಗ್ ಸ್ಟಾರ್ ಯಶ್ ಆಗಿ ಪರಭಾಷೆಗಳಲ್ಲೂ ತಮ್ಮದೇ ಅಭಿಮಾನಿ ವರ್ಗದವರನ್ನು ಹೊಂದಿರುವುದು ನಮಗೆ ಹೆಮ್ಮೆಯ ಸಂಗತಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಜ್ಯೋತಿಷಿ ಮಾತು ಕೇಳಿ ರಕ್ಷಿತ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ್ರಾ ರಶ್ಮಿಕಾ?!