Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸೆಲೆಬ್ರಿಟಿ ಆದ ಮೇಲೆ ನಿಭಾಯಿಸಲೂ ಕಲಿಯಬೇಕು: ರಶ್ಮಿಕಾಗೆ ಕಿಚ್ಚ ಸುದೀಪ್ ಕಿವಿಮಾತು

webdunia
ಬುಧವಾರ, 4 ಜನವರಿ 2023 (16:15 IST)
Photo Courtesy: Twitter
ಬೆಂಗಳೂರು: ಇತ್ತೀಚೆಗೆ ಕನ್ನಡ ಸಿನಿಮಾವನ್ನು ಕಡೆಗಣಿಸುತ್ತಿದ್ದಾರೆಂಬ ಆರೋಪದಲ್ಲಿ ನಟಿ ರಶ್ಮಿಕಾ ಮಂದಣ್ಣ ಪದೇ ಪದೇ ಟ್ರೋಲ್ ಗೊಳಗಾಗುತ್ತಿದ್ದಾರೆ.

ರಶ್ಮಿಕಾ ಸಂದರ್ಶನದಲ್ಲಿ ನೀಡುವ ಹೇಳಿಕೆಗಳು ಪದೇ ಪದೇ ಟೀಕೆಗೊಳಗಾಗುತ್ತಿರುತ್ತವೆ. ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆ ಹೇಳುವಾಗ ಕೈ ಸನ್ನೆ ಮಾಡಿದ್ದಕ್ಕೆ ಅವರನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು.

ಈ ಬಗ್ಗೆ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲ. 15-20 ವರ್ಷಗಳ ಹಿಂದೆ ಮಾಧ್ಯಮದವರು ನಮ್ಮನ್ನು ಸಂದರ್ಶನ ಮಾಡುತ್ತಿದ್ದರು. ಆಗಿನ ಕಾಲಕ್ಕೆ ಅದು ಹೊಸದು. ಡಾ.ರಾಜ್ ಕುಮಾರ್ ಕಾಲದಲ್ಲಿ ದೂರದರ್ಶನ ಮತ್ತು ಪೇಪರ್ ಬಿಟ್ಟರೆ ಏನೂ ಇರಲಿಲ್ಲ. ಹಾಗಂತ ಅಂದಿನ ಕಾಲವೇ ಚೆನ್ನಾಗಿತ್ತು ಎಂದು ಹೇಳಲಾಗದು. ನಾವು ಪಬ್ಲಿಕ್ ಫಿಗರ್ ಆದ ಮೇಲೆ ಎಲ್ಲವನ್ನೂ ನಿಭಾಯಿಸಲು ಕಲಿಯಬೇಕು. ನಮಗೆ ಹೂಮಾಲೆ ಜೊತೆಗೆ ಮೊಟ್ಟೆ, ಟೊಮೆಟೋ, ಕಲ್ಲುಗಳೂ ನಮ್ಮ ಮೇಲೆ ಬೀಳುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ನಟಿ ನಿಕ್ಕಿ ಗಲ್ರಾನಿ ಹುಟ್ಟುಹಬ್ಬ