Publish Date: Wed, 23 Dec 2020 (10:27 IST)
Updated Date: Wed, 23 Dec 2020 (10:28 IST)
ಬೆಂಗಳೂರು: ಅಭಿಮಾನಿಗಳು ಭಾರೀ ನಿರೀಕ್ಷೆಯಿಂದ ಕಾಯುತ್ತಿರುವ ರಾಬರ್ಟ್ ಸಿನಿಮಾ ಬಿಡುಗಡೆ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಸುಳಿವೊಂದನ್ನು ನೀಡಿದ್ದಾರೆ.
ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರಾವಳಿ ನಡೆಸಿರುವ ನಿರ್ದೇಶಕ ತರುಣ್ ಗೆ ಅಭಿಮಾನಿಯೊಬ್ಬರು ಡಿ ಬಾಸ್ ಬರ್ತ್ ಡೇಗೆ ರಾಬರ್ಟ್ ಅಪ್ ಡೇಟ್ ಕೊಡಿ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ತರುಣ್ ಡಿ ಬಾಸ್ ಬರ್ತ್ ಡೇಗೆ ಬರೀ ಅಪ್ ಡೇಟ್ ಅಲ್ಲ, ಹಬ್ಬನೇ ಮಾಡೋಣ ಎನ್ನುವ ಮೂಲಕ ಆ ಸಮಯಕ್ಕೆ ಚಿತ್ರ ಬಿಡುಗಡೆ ಮಾಡುವ ಸುಳಿವು ನೀಡಿದ್ದಾರೆ. ಫೆಬ್ರವರಿ 16 ರಂದು ದರ್ಶನ್ ಬರ್ತ್ ಡೇ ಇದ್ದು, ಆ ಸಮಯಕ್ಕೆ ಸರ್ಕಾರ ಥಿಯೇಟರ್ ಮೇಲಿನ ನಿರ್ಬಂಧ ಸಡಿಲಿಸಿದರೆ ಚಿತ್ರ ತೆರೆ ಕಂಡರೂ ಅಚ್ಚರಿಯಿಲ್ಲ.