Publish Date: Wed, 23 Dec 2020 (09:11 IST)
Updated Date: Wed, 23 Dec 2020 (09:16 IST)
ಬೆಂಗಳೂರು: ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಇಂದು ಮಧ‍್ಯಾಹ್ನದ ಊಟ ಮಾಡಲ್ವಂತೆ. ಒಂದು ಹೊತ್ತು ಉಪವಾಸ ಕೂರುತ್ತಿರುವುದಾಗಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.
ಇಂದು ಕಿಸಾನ್ ದಿವಸ್. ದೆಹಲಿಯಲ್ಲಿ ಕೇಂದ್ರದ ಹೊಸ ರೈತ ಕಾಯಿದೆ ವಿರೋಧಿಸಿ ನೂರಾರು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇವರಿಗೆ ಬೆಂಬಲ ನೀಡುವ ಸಲುವಾಗಿ ತಾವು ಒಂದು ಹೊತ್ತು ಉಪವಾಸವಿರುವುದಾಗಿ ರಮ್ಯಾ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ರೈತರ ಪ್ರತಿಭಟನೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.