Publish Date: Tue, 22 Dec 2020 (10:44 IST)
Updated Date: Tue, 22 Dec 2020 (10:46 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳು ಎಲ್ಲೇ ಹೋದರೂ ಕೇಳುತ್ತಿರುತ್ತಾರೆ. ಇದರ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಸ್ಪಷ್ಟನೆ ನೀಡಿದ್ದಾರೆ.
ಕೇವಲ 50 ಶೇಕಡಾ ವೀಕ್ಷಕರ ಹಾಜರಾತಿ ಇರುವಾಗ ಚಿತ್ರಮಂದಿರದಲ್ಲಿ ಸಿನಿಮಾ ಹೇಗೆ ಬಿಡುಗಡೆ ಮಾಡುವುದು? ಚಿತ್ರಕ್ಕೆ ಸಾಕಷ್ಟು ಬಂಡವಾಳ ಹಾಕಲಾಗಿದೆ. ಹಾಗೇ ಸುಮ್ಮನೇ ಬಿಡುಗಡೆ ಮಾಡಿದ್ರೆ ನಿರ್ಮಾಪಕರಿಗೂ ಲಾಸ್ ಆಗಲ್ವಾ? ಸಿನಿಮಾದ ಟೀಸರ್, ಟ್ರೈಲರ್, ಹಾಡುಗಳ ಬಿಡುಗಡೆ ಬಗ್ಗೆ ಎಲ್ಲಾ ಬ್ಲೂ ಪ್ರಿಂಟ್ ಹಾಕಿಕೊಂಡಿದ್ದೀವಿ. ರಿಲೀಸ್ ಡೇಟ್ ಒಂದು ಕನ್ ಫರ್ಮ್ ಆದ ಮೇಲೆ ಎಲ್ಲಾ ಅಪ್ ಡೇಟ್ ಕೊಡ್ತೀವಿ ಎಂದಿದ್ದಾರೆ.