Publish Date: Fri, 09 Oct 2020 (10:16 IST)
Updated Date: Fri, 09 Oct 2020 (10:18 IST)
ಬೆಂಗಳೂರು: ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಗೆ ಇಂದು ಹುಟ್ಟುಹಬ್ಬದ ಸಂಭ‍್ರಮ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತರುಣ್ ಗೆ ಶುಭಾಷಯದ ಜತೆಗೆ ದರ್ಶನ್ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.
ತರುಣ್ ರನ್ನು ಬ್ರದರ್ ಫ್ರಂ ಎನದರ್ ಮದರ್ ಎಂದು ಕರೆದಿರುವ ದರ್ಶನ್ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ. ಜತೆಗೆ ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಲಾಂಚ್ ಮಾಡಿ ನಿರ್ದೇಶಕರಿಗೆ ಉಡುಗೊರೆ ಕೊಟ್ಟಿದ್ದಾರೆ. ತರುಣ್ ದರ್ಶನ್ ಗೆ ಉತ್ತಮ ಸ್ನೇಹಿತರೂ ಕೂಡಾ.