Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಸಮಯದಲ್ಲಿ ‘ಹೀರೋ’ ಚಿತ್ರೀಕರಣ ಮಾಡಲು ಪಟ್ಟ ಸಾಹಸ ವಿವರಿಸಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ
ಬೆಂಗಳೂರು , ಭಾನುವಾರ, 1 ನವೆಂಬರ್ 2020 (11:03 IST)
ಬೆಂಗಳೂರು: ಕ್ರಿಯೇಟಿವ್ ನಿರ್ದೇಶಕ ಎಂದೇ ಗುರುತಿಸಿಕೊಳ್ಳುವ ರಿಷಬ್ ಶೆಟ್ಟಿ ಲಾಕ್ ಡೌನ್ ಸಮಯದಲ್ಲಿ ಊರಿಡೀ ಲಾಕ್ ಆಗಿರುವಾಗ ‘ಹೀರೋ’ ಎಂಬ ಸಿನಿಮಾವನ್ನು ಚಿತ್ರೀಕರಿಸಿ ಸೈ ಎನಿಸಿಕೊಂಡಿದ್ದಾರೆ.


ಈ ಸಿನಿಮಾದ ಚಿತ್ರೀಕರಣಕ್ಕೆ ಪಟ್ಟ ಕಷ್ಟವನ್ನು ಅವರು ವಿವರಿಸಿದ್ದಾರೆ. ಆಗೆಲ್ಲಾ ಕಾರ್ಮಿಕರನ್ನು ಬಳಸಿಕೊಳ್ಳುವಂತಿರಲಿಲ್ಲ. ಹೀಗಾಗಿ ತಮ್ಮ ಸ್ನೇಹಿತರು, ನಟ ಪ್ರಮೋದ್ ಶೆಟ್ಟಿ, ರಕ್ಷಿತ್ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲು ಪಾತ್ರೆಗಳನ್ನು ಹೆಗಲ ಮೇಲೆತ್ತಿಕೊಂಡು ಬರುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಎಲ್ಲವೂ ಕಲೆಗಾಗಿ, ಈ ಒಂದು ಸಿನಿಮಾದ ಶೂಟಿಂಗ್ ಅನುಭವ ಜೀವಮಾನ ಪರ್ಯಂತ ಮರೆಯುವಂತಿಲ್ಲ. ಸಿನಿಮಾದ ಬಗೆಗಿನ ಪ್ರೀತಿಯೇ ನಮ್ಮನ್ನು ಈ ಕೆಲಸವನ್ನೆಲ್ಲಾ ಮಾಡಿಸಿತು ಎಂದು ರಿಷಬ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ ಸ್ಯಾಂಡಲ್ ವುಡ್ ತಾರೆಯರು