Select Your Language

Notifications

webdunia
webdunia
webdunia
webdunia

ಅವರ ಆರೋಗ್ಯ ಸರಿಯಿದೆಯಾ? ಏನು ಮಾಡ್ತಿದ್ದಾರೆ ಅವರು? ಚೇತನ್ ಆರೋಪಕ್ಕೆ ರಿಷಬ್ ಶೆಟ್ಟಿ ಟಾಂಗ್

ಅವರ ಆರೋಗ್ಯ ಸರಿಯಿದೆಯಾ? ಏನು ಮಾಡ್ತಿದ್ದಾರೆ ಅವರು? ಚೇತನ್ ಆರೋಪಕ್ಕೆ ರಿಷಬ್ ಶೆಟ್ಟಿ ಟಾಂಗ್
ಬೆಂಗಳೂರು , ಗುರುವಾರ, 20 ಅಕ್ಟೋಬರ್ 2022 (09:00 IST)
WD
ಬೆಂಗಳೂರು: ಕಾಂತಾರ ಸಿನಿಮಾದಲ್ಲಿ ಚಿತ್ರಿಸಲಾಗಿರುವ ದೈವ ಕೋಲ ಹಿಂದೂಗಳ ಸಂಪ್ರದಾಯ ಎಂಬುದು ತಪ್ಪು. ದೈವಾರಾಧನೆ ಮೂಲ ಹಿಂದೂ ಧರ್ಮವಲ್ಲ ಎಂದು ವಿವಾದ ಸೃಷ್ಟಿಸಿದ್ದ ನಟ ಚೇತನ್ ಗೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ತಿರುಗೇಟು ಕೊಟ್ಟಿದ್ದಾರೆ.

ತೆಲುಗು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಷಬ್ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಅವರ ಆರೋಪಕ್ಕೆ ನನ್ನದು ನೋ ಕಾಮೆಂಟ್ಸ್ ಎಂದಿದ್ದಾರೆ.

‘ಅವರು ಏನು ಮಾಡ್ತಾರೆ? ಅವರ ಆರೋಗ್ಯ ನೋಡಿಕೊಳ್ಳಲಿ’ ಎಂದು ನಕ್ಕ ರಿಷಬ್ ಬಳಿಕ ‘ನಾನು ಈ ಸಿನಿಮಾವನ್ನು ಮಾಡುವಾಗ ಈ ದೈವಾರಾಧನೆ ಮಾಡುವಂತಹ ಜನರೇ ನನ್ನ ಜೊತೆಗಿದ್ದರು. ಪ್ರತೀ ಶಾಟ್ ಬಗ್ಗೆ ಅವರನ್ನು ಕೇಳಿಕೊಂಡು ಆ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಈ ಸಿನಿಮಾ ಮಾಡಿದ್ದೇವೆ. ಮತ್ತೆ, ನಾನು ಅದೇ ತುಳುನಾಡಿನಿಂದ ಬಂದವನು. ದೈವಾರಾಧನೆ ಎಲ್ಲವನ್ನೂ ಚಿಕ್ಕ ವಯಸ್ಸಿನಿಂದಲೇ ನೋಡಿಕೊಂಡು ಬಂದವನು. ಹಾಗಾಗಿ ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ನನ್ನ ಜೀವಹಿಂಡಿ ಈ ಸಿನಿಮಾಗೆ ಕೆಲಸ ಮಾಡಿದ್ದೇನೆ. ಸಿನಿಮಾ ಮಾಡುವುದು ನನ್ನ ಕೆಲಸ. ಚೇತನ್ ಆರೋಪಗಳಿಗೆ ಅದಕ್ಕೆ ಸಂಬಂಧಪಟ್ಟವರೇ ಉತ್ತರ ಕೊಡುತ್ತಾರೆ. ನನ್ನದು ನೋ ಕಾಮೆಂಟ್ಸ್’ ಎಂದಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಆಸ್ಕರ್ ಗೆ ಆಯ್ಕೆಯಾಗಬೇಕು!