Webdunia - Bharat's app for daily news and videos

Install App

ಗಂಧದ ಗುಡಿ ಕಾರ್ಯಕ್ರಮಕ್ಕೆ ರಿಷಬ್, ಜಗ್ಗೇಶ್ ಗೈರಾಗಿದ್ದು ಯಾಕೆ? ಕಾರಣ ಇಲ್ಲಿದೆ

Webdunia
ಶನಿವಾರ, 22 ಅಕ್ಟೋಬರ್ 2022 (09:30 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಪರಭಾಷಾ ಕಲಾವಿದರೂ ಬಂದಿದ್ದರು.

ಆದರೆ ಇತ್ತೀಚೆಗಷ್ಟೇ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, ಪುನೀತ್ ತುಂಬಾ ಇಷ್ಪಪಡುತ್ತಿದ್ದ ನವರಸನಾಯಕ ಜಗ್ಗೇಶ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದಕ್ಕೆ ಕಾರಣವನ್ನೂ ಇಬ್ಬರೂ ಸ್ಟಾರ್ ಗಳು ಹೇಳಿದ್ದಾರೆ.

ನವರಸನಾಯಕ ಜಗ್ಗೇಶ್ ಈಗ ಅಮೆರಿಕಾ ಪ್ರವಾಸದಲ್ಲಿದ್ದಾರೆ. ವಾಪಸ್ ಬರಲು ತಕ್ಷಣಕ್ಕೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ನನ್ನ ಪ್ರೀತಿಯ ಅಪ್ಪು ಕೊನೆಯ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಕೂಡಾ ತಾವು ಗೈರಾಗಿದ್ದರ ಕಾರಣ  ವಿವರಿಸಿದ್ದಾರೆ. ‘ಪೂರ್ವ ನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಬಹರೈನ್ ನಲ್ಲಿರುವ ಕಾರಣ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮ ಲೈವ್ ನೋಡ್ತಾ ಕಣ್ತುಂಬಿ ಬಂದವು. ನಾವೂ ಅಲ್ಲಿ ಆ ನೆನಪುಗಳ ನಡುವೆ ಇರಬೇಕಿತ್ತು ಎನಿಸಿತು. ಅಪ್ಪು ಸರ್ ಕ್ಷಮೆಯಿರಲಿ. ಮೊದಲ ದಿನವೇ ಗಂಧದ ಗುಡಿಯಲ್ಲಿ ಭೇಟಿಯಾಗೋಣ’ ಎಂದು ರಿಷಬ್ ಕ್ಷಮೆ ಯಾಚಿಸಿದ್ದಾರೆ.

-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಡಿವೋರ್ಸ್ ವದಂತಿ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಂನಲ್ಲಿ ಭಾರೀ ಬದಲಾವಣೆ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

ಸರ್ವಾಧಿಕಾರ, ಸನಾತನ ಸಂಕೋಲೆಯನ್ನು ಶಿಕ್ಷಣದಿಂದಷ್ಟೇ ಮುರಿಯಬಹುದು: ಕಮಲ್ ಹಾಸನ್

ಮುಂದಿನ ಸುದ್ದಿ
Show comments