ಬೆಂಗಳೂರು: ಸರ್ಕಾರಿ ಪ್ರಾ. ಶಾಲೆ ಕಾಸರಗೋಡು ಸಿನಿಮಾ ಶೂಟಿಂಗ್ ಮಾಡಿದ ಶಾಲೆಯ ದುರಸ್ತಿ ಕಾರ್ಯ ಮಾಡಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ರಿಷಬ್ ತಾವು ಸಿನಿಮಾ ಶೂಟಿಂಗ್ ಮಾಡಿದ ಶಾಲೆಯನ್ನು ದುರಸ್ತಿಗೊಳಿಸಿದ್ದಾರೆ. ಈ ಶಾಲೆ ಸಿನಿಮಾದಲ್ಲಿರುವಂತೆಯೇ ಸೂರು ಸೋರುವ ಸ್ಥಿತಿಯಲ್ಲಿತ್ತು.
ಈಗ ಛಾವಣಿ ರಿಪೇರಿ ಮಾಡಿ, ಗೋಡೆಗೆ ಹೊಸ ಬಣ್ಣ ಬಳಿದು, ನಾಡಿನ ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಬರೆಯಿಸಿ ರಿಷಬ್ ಶೆಟ್ಟಿ ನೇತೃತ್ವದ ತಂಡ ರಜೆ ಮುಗಿಸಿ ಬರುವ ಶಾಲೆಗೆ ಬರಲಿರುವ ಮಕ್ಕಳಿಗೆ ಅಚ್ಚರಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ