ಬೆಂಗಳೂರು: ಯಶಸ್ವಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಈಗ ತಮ್ಮ ಪ್ರೊಡಕ್ಷನ್ ನ ಹೊಸ ಸಿನಿಮಾಗೆ ನಾಯಕಿಯ ಹುಡುಕಾಟದಲ್ಲಿದ್ದಾರೆ.
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ನಾಯಕಿ ಆಗಬೇಕೆಂದು ಬಯಸುವವರಿಗೆ ಸುವರ್ಣಾವಕಾಶ ನೀಡುತ್ತಿದ್ದಾರೆ.
ತಮ್ಮ ಸಿನಿಮಾಗೆ ನಾಯಕಿಯ ಹುಡುಕಾಟದಲ್ಲಿದ್ದೇವೆ. ಆಸಕ್ತಿಯಿದ್ದರೆ ನಿಮ್ಮ ಇತ್ತೀಚೆಗಿನ ಭಾವಚಿತ್ರ, ವಿಡಿಯೋವನ್ನು ನಮ್ಮ ಈಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ ಎಂದು ಆಹ್ವಾನಿಸಿದ್ದಾರೆ.
[email protected] ಎಂಬ ಈ ಮೇಲ್ ವಿಳಾಸಕ್ಕೆ ಸ್ವವಿವರ ಕಳುಹಿಸಿಕೊಡಲು ರಿಷಬ್ ಶೆಟ್ಟಿ ಆಹ್ವಾನ ನೀಡಿದ್ದಾರೆ.