Select Your Language

Notifications

webdunia
webdunia
webdunia
webdunia

ಸೆಲೆಬ್ರಿಟಿಯಿಂದ ಸೆಲೆಬ್ರಿಟಿಗೆ ಚಾಲೆಂಜ್ ಎಂದ ಡಿ ಬಾಸ್ ದರ್ಶನ್! ಇಂದು ಮಧ್ಯಾಹ್ನ ಫೇಸ್ ಬುಕ್ ಲೈವ್ ನಲ್ಲಿ ಹೇಳಲಿರುವುದು ಏನು?!

ಸೆಲೆಬ್ರಿಟಿಯಿಂದ ಸೆಲೆಬ್ರಿಟಿಗೆ ಚಾಲೆಂಜ್ ಎಂದ ಡಿ ಬಾಸ್ ದರ್ಶನ್! ಇಂದು ಮಧ್ಯಾಹ್ನ ಫೇಸ್ ಬುಕ್ ಲೈವ್ ನಲ್ಲಿ ಹೇಳಲಿರುವುದು ಏನು?!
ಬೆಂಗಳೂರು , ಮಂಗಳವಾರ, 2 ಜುಲೈ 2019 (09:12 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಳ್ಳಂ ಬೆಳಿಗ್ಗೆಯೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಸಂದೇಶವೊಂದು ಇದೀಗ ಅಭಿಮಾನಿಗಳು, ಚಿತ್ರರಂಗದವರ ಕುತೂಹಲಕ್ಕೆ ಕಾರಣವಾಗಿದೆ.


ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್. ಮಧ್ಯಾಹ್ನ ಫೇಸ್ ಬುಕ್ ಲೈವ್ ಗೆ ಬಂದು ಎಲ್ಲಾ ಹೇಳ್ತೀನಿ. ಇಂತಿ ನಿಮ್ಮ ದಾಸ ದರ್ಶನ್’ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ದರ್ಶನ್ ಯಾವ ಸೆಲೆಬ್ರಿಟಿಗೆ ಚಾಲೆಂಜ್ ಮಾಡಲಿದ್ದಾರೆ? ಯಾವ ಸೆಲೆಬ್ರಿಟಿ ಬಗ್ಗೆ ಹೀಗೆ ಹೇಳಿದ್ದಾರೆ ಎಂಬ ಕುತೂಹಲ ಈಗ ಎಲ್ಲರಲ್ಲಿ ಮನೆ ಮಾಡಿದೆ.

ಈಗಾಗಲೇ ಕುರುಕ್ಷೇತ್ರ ಸಿನಿಮಾ ಅಡಿಯೋ ರಿಲೀಸ್ ಪಾಸ್ ನಲ್ಲಿ ದರ್ಶನ್ ಫೋಟೋ ಇಲ್ಲ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ. ಅದಕ್ಕೆ ನಿನ್ನೆಯೇ ದರ್ಶನ್ ಟ್ವೀಟ್ ಮಾಡಿ, ಇದು ಬಹುತಾರಾಗಣದ ಸಿನಿಮಾ. ಹಾಗಾಗಿ ಎಲ್ಲರಿಗೂ ಸಮಾನ ಗೌರವ ನೀಡಲು ಫೋಟೋ ಹಾಕಲಾಗಿಲ್ಲ. ಎಲ್ಲರೂ ಅಡಿಯೋ ರಿಲೀಸ್ ಕಾರ್ಯಕ್ರದಲ್ಲಿ ಆರಾಮವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದ್ದರು.

ಅದರ ನಡುವೆ ಇಂದು ಬೆಳಿಗ್ಗೆ ದರ್ಶನ್ ಈ ರೀತಿ ಯಾರನ್ನು ಉದ್ದೇಶಿಸಿ ಟ್ವೀಟ್ ಮಾಡಿರಬಹುದು ಎಂಬ ಕುತೂಹಲ ಕಾದಿದೆ. ಯಾವುದಕ್ಕೂ ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಮಧ್ಯಾಹ್ನದವರೆಗೆ ಕಾಯಲೇಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಸಹೋದರ ದಿನಕರ್ ಗೆ ಜತೆಯಾಗಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್