ಹೈದರಾಬಾದ್ : ಖ್ಯಾತ ನಟ ಮಹೇಶ್ ಬಾಬು ಅವರ ಅಭಿನಯದ ಸರ್ಕಾರು ವಾರಾ ಪಾಟಾ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ಹರಿದಾಡುತ್ತಿದೆ.
ಹೌದು. ಸರ್ಕಾರು ವಾರಾ ಪಾಟಾ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೇ31ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ರೀತಿ ಸುಳ್ಳು ಸುದ್ದಿ ಹರಡಬಾರದು ಎಂದು ಮಹೇಶ್ ಬಾಬು ತಮ್ಮ ಅಭಿಮಾನಿಗಳಲ್ಲಿ ಈಗಾಗಲೇ ಮನವಿ ಮಾಡಿದ್ದಾರೆ.
ಆದರೆ ಇದೀಗ ಚಿತ್ರದ ನಿರ್ಮಾಪಕರು ಮೇ31ರಂದು ಚಿತ್ರದ ಯಾವುದೇ ಫಸ್ಟ್ ಲುಕ್ ಬಿಡುಗಡೆಯಾಗುತ್ತಿಲ್ಲ ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ. ಹಾಗೇ ಸುಳ್ಳು ಸುದ್ದಿ ಹರಡಬಾರದೆಂದು ಮನವಿ ಮಾಡಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!