Select Your Language

Notifications

webdunia
webdunia
webdunia
webdunia

ರೆಬೆಲ್‌ ಸ್ಟಾರ್‌ ಪ್ರಭಾಸ್‌ಗೆ ಜನ್ಮದಿನದ ಸಂಭ್ರಮ: ನಿವಾಸದ ಮುಂದೆ ಅಭಿಮಾನಿಗಳ ಗೌಜಿ ಗದ್ದಲ

Rebel star Prabhas

Sampriya

ಹೈದರಾಬಾದ್ , ಬುಧವಾರ, 23 ಅಕ್ಟೋಬರ್ 2024 (14:40 IST)
Photo Courtesy X
ಹೈದರಾಬಾದ್​: ಟಾಲಿವುಡ್‌ನ ರೆಬೆಲ್‌ ಸ್ಟಾರ್ ಪ್ರಭಾಸ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳಲ್ಲಿ ಸಡಗರ ಮೇರು ಮೀರಿದೆ.  

ಕೇಕ್ ಕತ್ತರಿಸುವ ಮೂಲಕ, ಕಟೌಟ್‌ಗೆ ಹಾಲೆರೆಯುವ ಮೂಲಕ ಮತ್ತು ಪಟಾಕಿ ಸಿಡಿಸಿ ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಇನ್ನು ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಬುಧವಾರ ಮರು ಬಿಡುಗಡೆಯಾಗುತ್ತಿರುವ ಕಾರಣ ಥಿಯೇಟರ್‌ಗಳಲ್ಲಿ ಸಹ ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಮುಂದಾಗಿದ್ದಾರೆ.

ಇದರ ನಡುವೆ ಪ್ರಭಾಸ್ ಹೈದರಾಬಾದ್‌ನಲ್ಲಿ ಅಭಿಮಾನಿಗಳು ಜುಬಿಲಿ ಹಿಲ್ಸ್‌ನ ಪೆದ್ದಮ್ಮ ಮಟ್ಲ ದೇವಸ್ಥಾನದ ರಸ್ತೆಯಲ್ಲಿರುವ ಪ್ರಭಾಸ್​ ಮನೆ ಮುಂದೆ ಮಂಗಳವಾರ ಮಧ್ಯರಾತ್ರಿಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಕೆಲವು ಅಭಿಮಾನಿಗಳು ಉತ್ಸಾಹದಿಂದ ಪ್ರಭಾಸ್ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದರು. ಮಾಹಿತಿ ಪಡೆದ ಪೊಲೀಸರು ತಕ್ಷಣ ಪ್ರಭಾಸ್ ಮನೆಗೆ ಆಗಮಿಸಿ ಅಭಿಮಾನಿಗಳನ್ನು ನಿಯಂತ್ರಿಸಿದರು. ಪ್ರಭಾಸ್ ಮನೆ ಮುಂದೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅನುಮತಿ ಇಲ್ಲ ಎಂದು ಅಭಿಮಾನಿಗಳಿಗೆ ಪೊಲೀಸರು ಹೇಳಿ ಕಳುಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಮದುವೆಗೆ ಸಜ್ಜಾದ ಕನ್ನಡ ಕಿರುತೆರೆ ನಟಿ ಮಾನಸಾ ಮನೋಹರ್