Select Your Language

Notifications

webdunia
webdunia
webdunia
webdunia

ಎರಡನೇ ಮದುವೆಗೆ ಸಜ್ಜಾದ ಕನ್ನಡ ಕಿರುತೆರೆ ನಟಿ ಮಾನಸಾ ಮನೋಹರ್

Manasa Manohar
Photo Credit: Instagram
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟಿ ಮಾನಸಾ ಮನೋಹರ್ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಎಂಗೇಜ್ ಮೆಂಟ್ ಮಾಡಿಕೊಂಡಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಾನಸಾ ಮನೋಹರ್ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಮೀರಾ ಪಾತ್ರದ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗದವರನ್ನು ಹೊಂದಿದ್ದರು. ಇದಾದ ಬಳಿಕ ಈಗ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಪೋಷಕ ಪಾತ್ರ ಮಾಡುತ್ತಿದ್ದಾರೆ. ಸ್ಟೈಲಿಶ್ ಲುಕ್ ಮೂಲಕ ಮಾನಸಾ ಮನೋಹರ್ ಅಭಿಮಾನಿಗಳನ್ನು ಸೆಳೆಯುತ್ತಾರೆ.

ಮಾನಸಾಗೆ ಈಗಾಗಲೇ ಒಂದು ಮದುವೆಯಾಗಿ ಬ್ರೇಕಪ್ ಆಗಿದೆ. ಇದೀಗ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಈ ವಿಚಾರವನ್ನು ಅವರೇ ಹಿಂಜರಿಕೆಯಿಲ್ಲದೇ ಹೇಳಿದ್ದಾರೆ. ನಿಶ್ಚಿತಾರ್ಥದ ಫೋಟೋ ಹಂಚಿಕೊಂಡ ಮಾನಸಾಗೆ ನೆಟ್ಟಿಗರು ಇದು ಎರಡನೇ ಮದುವೆಯಾ ಎಂದು ಕೇಳಿದ್ದಾರೆ. ಇದಕ್ಕೆ ಅವರೂ ಕೂಡಾ ಹೌದು ಇದು ಎರಡನೆಯ ಮದುವೆ ಎಂದಿದ್ದಾರೆ.

ಪ್ರೀತಂ ಚಂದ್ರ ಎಂಬವರ ಜೊತೆ ಮಾನಸಾ ಮದುವೆಯಾಗುತ್ತಿದ್ದಾರೆ. ಪ್ರೀತಂ ತಮ್ಮದೇ ಫುಟ್ಬಾಲ್ ಆಟಗಾರನಾಗಿದ್ದು ತಮ್ಮದೇ ಫುಟ್ಬಾಲ್ ಅಕಾಡಮಿ ಹೊಂದಿದ್ದಾರೆ. ಮಾನಸಾ ಎಂಗೇಜ್ ಮೆಂಟ್ ಫೋಟೋಗಳನ್ನು ನೋಡಿ ನೆಟ್ಟಿಗರು ಶುಭಾಶಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಹೆಂಡತಿಯಾಗುವುದು ಸುಲಭವಲ್ಲ, ರಾಧಿಕಾ ಪಂಡಿತ್ ಹಣದ ವಿಚಾರಕ್ಕೆ ಯಶ್ ಗೆ ಏನು ಹೇಳ್ತಾರೆ ರಿವೀಲ್