Select Your Language

Notifications

webdunia
webdunia
webdunia
Sunday, 13 April 2025
webdunia

BBK11: ಬಿಗ್ ಬಾಸ್ ಕನ್ನಡ ಈ ವಾರಂತ್ಯದ ಎಪಿಸೋಡ್ ಕ್ಯಾನ್ಸಲ್

Kiccha Sudeep

Krishnaveni K

ಬೆಂಗಳೂರು , ಮಂಗಳವಾರ, 22 ಅಕ್ಟೋಬರ್ 2024 (10:35 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಈ ವಾರಂತ್ಯದ ಕಿಚ್ಚ ಸುದೀಪ್ ಜೊತೆಗಿನ ಎಪಿಸೋಡ್ ಶೂಟಿಂಗ್ ಕ್ಯಾನ್ಸಲ್ ಆಗಿದ್ದು, ಈ ವಾರಂತ್ಯಕ್ಕೆ ಪಂಚಾಯ್ತಿ ಇರಲ್ಲ.

ಕಿಚ್ಚ ಸುದೀಪ್ ಈಗ ಮಾತೃ ವಿಯೋಗದ ದುಃಖದಲ್ಲಿದ್ದಾರೆ. ಸದ್ಯಕ್ಕೆ ಅವರು ಯಾವುದೇ ಶೂಟಿಂಗ್ ನಲ್ಲಿ ಭಾಗಿಯಾಗುವ ಪರಿಸ್ಥಿತಿಯಲ್ಲಿಲ್ಲ. ತಾಯಿ ತೀರಿಕೊಂಡಿರುವ ದುಃಖದಲ್ಲಿರುವ ತಂದೆಯ ಆರೋಗ್ಯವೂ ಚೆನ್ನಾಗಿಲ್ಲ. ಹೀಗಾಗಿ ಸದ್ಯಕ್ಕಂತೂ ಸುದೀಪ್ ಕುಟುಂಬಕ್ಕಾಗಿ ಸಮಯ ಮೀಡಲಿಡಬೇಕಾಗಿದೆ.

ಹೀಗಾಗಿ ಈ ವಾರಂತ್ಯದಲ್ಲಿ ಕಿಚ್ಚನ ಜೊತೆಗಿನ ಎಪಿಸೋಡ್ ಪ್ರಸಾರವಾಗಲ್ಲ. ಶೂಟಿಂಗ್ ಇಲ್ಲ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಯಾವ ಕಾರಣಕ್ಕೆ ಕಿಚ್ಚನ ಎಪಿಸೋಡ್ ಇಲ್ಲ ಎಂದು ಸ್ಪರ್ಧಿಗಳಿಗೆ ತಿಳಿಸಿಲ್ಲ. ಈ ವಾರ ಎಲಿಮಿನೇಷನ್ ಇರಲ್ಲ, ವೀಕೆಂಡ್ ಪಂಚಾಯ್ತಿ ಇರಲ್ಲ ಎಂದು ಮಾತ್ರ ಹೇಳಲಾಗಿದೆ.

ಈ ವಿಚಾರ ಕೇಳಿ ಐಶ್ವರ್ಯಾ ಕುಣಿದಾಡಿದ್ದಾರೆ. ಆದರೆ ಭವ್ಯಾ ಯಾವ ಕಾರಣಕ್ಕೆ ಇರಬಹುದು ಎಂದು ಕೊಂಚ ಆತಂಕಗೊಂಡರು. ಕಳೆದ ವಾರ ಬಿಗ್ ಬಾಸ್ ಶೂಟಿಂಗ್ ನಡುವೆಯೇ ಕಿಚ್ಚ ಸುದೀಪ್ ಗೆ ತಾಯಿಯ ಅನಾರೋಗ್ಯದ ವಿಚಾರ ತಿಳಿದುಬಂದಿತ್ತು. ಭಾನುವಾರ ಅವರ ತಾಯಿ ಸರೋಜ ಅನಾರೋಗ್ಯದಿಂದ ನಿಧನರಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಗಚೈತನ್ಯ, ಶೋಭಿತಾ ಧೂಲಿಪಾಲ ಮನೆಯಲ್ಲಿ ರಂಗೇರಿದ ವಿವಾಹ ಪೂರ್ವ ಕಾರ್ಯಕ್ರಮಗಳು