ಕರ್ನಾಟಕದ ದಿವಂಗತ ರೆಬೆಲ್ ಸ್ಟಾರ್ "ಅಂಬರೀಶ್" ಅವರ ಪುತ್ರ "ಅಭಿಷೇಕ್" ಅವರಿಗೆ ಇಂದು ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಇರುವ ಖಾಸಗಿ ಹೋಟೆಲ್ ಒಂದರಲ್ಲಿ ಖ್ಯಾತ ಫ್ಯಾಶನ್ ಡಿಸೈನರ್ ಆದಂತಹ ಪ್ರಸಾದ್ ಬಿದ್ದಪ್ಪ ಅವರ ಮಗಳಾದ "ಅವಿವಾ ಬಿದ್ದಪ್ಪ" ಅವರ ಜೊತೆ ನಿಶ್ಚಿತಾರ್ಥ ನಡೆಯಲಿದೆ.ಈ ಕಾರ್ಯಕ್ರಮವು ಬೆಳಿಗ್ಗೆ 9.30 ರಿಂದ10:30 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್. ಡಾ. ಶಿವರಾಜಕುಮಾರ್. ಸುದೀಪ್. ಯಶ್. ದರ್ಶನ್. ಸೇರಿದಂತೆ ಇನ್ನೂ ಅನೇಕ ನಟರು. ರಾಜಕಾರಣಿಗಳು. ಆಗಮಿಸಲಿದ್ದಾರೆ.ಇನ್ನು ಕುಟುಂಬ ಮತ್ತು ಆಪ್ತವರ್ಗದವರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಸಂಕ್ರಾಂತಿ ಹಬ್ಬದ ನಂತರ ವಿವಾಹ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯುವುದು.