Webdunia - Bharat's app for daily news and videos

Install App

ಇಂದಿನಿಂದ ಪ್ರಭಾಸ್ ಸಾಹೋ ಅಬ್ಬರ! ಈ ಕಾರಣಕ್ಕೆ ಆಕ್ಷನ್ ಥ್ರಿಲ್ಲರ್ ನೋಡಲೇಬೇಕು!

Webdunia
ಶುಕ್ರವಾರ, 30 ಆಗಸ್ಟ್ 2019 (09:40 IST)
ಹೈದರಾಬಾದ್: ತೆಲುಗು, ಕನ್ನಡ, ಹಿಂದಿ, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಇಂದಿನಿಂದ ತೆರೆಗೆ ಬರುತ್ತಿರುವ ಸಾಹೋ ಸಿನಿಮಾ ಬಿಡುಗಡೆ ಅಬ್ಬರ ಜೋರಾಗಿಯೇ ಇದೆ. ಈ ಬಹುನಿರೀಕ್ಷಿತ ಸಿನಿಮಾ ನೋಡಲೇಬೇಕಾದ ಐದು ಕಾರಣಗಳು ಇಲ್ಲಿವೆ.


ಬಾಹುಬಲಿ ಬಳಿಕ ಪ್ರಭಾಸ್ ಕಮ್ ಬ್ಯಾಕ್
ಬಾಹುಬಲಿ 2 ಸಿನಿಮಾ ಬಳಿಕ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರವಿದು. ಬಾಹುಬಲಿಯಷ್ಟೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಆ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆದ ಪ್ರಭಾಸ್ ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಂಡಿರಬಹುದು ಎಂಬ ಕುತೂಹಲವಿದ್ದರೆ ಚಿತ್ರ ನೋಡಲೇಬೇಕು.

ಪಕ್ಕಾ ಆಕ್ಷನ್, ಫುಲ್ ಎಂಟರ್ ಟೈನ್ ಮೆಂಟ್
ಆಕ್ಷನ್, ಥ್ರಿಲ್ಲರ್ ಸಿನಿಮಾ ಪ್ರಿಯರಿಗೆ ಈ ಸಿನಿಮಾ ರಸದೌತಣ ನೀಡುವುದು ಗ್ಯಾರಂಟಿ. ಟ್ರೈಲರ್ ನಲ್ಲೇ ಇದು ಪಕ್ಕಾ ಆಗಿದೆ. ಪ್ರತೀ ದೃಶ್ಯಗಳಲ್ಲೂ ರಿಚ್ ನೆಸ್ ಎದ್ದು ಕಾಣುವಂತಿದೆ. ಟ್ರೈಲರ್ ನಲ್ಲೇ ಮೈನವಿರೇಳಿಸುವ ಆಕ್ಷನ್ ತುಣುಕುಗಳನ್ನು ನೋಡಿದವರು ಪೂರ್ತಿ ಸಿನಿಮಾ ನೋಡಲೇಬೇಕು.

ಪ್ರಭಾಸ್-ಶ್ರದ್ಧಾ ರೊಮ್ಯಾನ್ಸ್
ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್-ಅನುಷ್ಕಾ ಶೆಟ್ಟಿ ಜೋಡಿಯ ರೊಮ್ಯಾನ್ಸ್ ಜನರಿಗೆ ಮೋಡಿ ಮಾಡಿತ್ತು. ಇವರಿಬ್ಬರೂ ನಿಜ ಜೀವನದಲ್ಲೂ ಒಂದಾಗಬೇಕು ಎಂದು ಈಗಲೂ ಜನ ಕಾಯ್ತಿದ್ದಾರೆ. ಈ ಸಿನಿಮಾದಲ್ಲಿ ಅದಕ್ಕೆ ಯಾವುದೇ ಕಮ್ಮಿಯಿಲ್ಲದಂತೆ ಶ್ರದ್ಧಾ ಕಪೂರ್-ಪ್ರಭಾಸ್ ರೊಮ್ಯಾನ್ಸ್ ಮಾಡಿದ್ದಾರೆ. ಇವರಿಬ್ಬರ ರೊಮ್ಯಾಂಟಿಕ್ ಹಾಡುಗಳು ಈಗಾಗಲೇ ಹಿಟ್ ಆಗಿದೆ.

ಬಹುತಾರಾಗಣ
ಈ ಸಿನಿಮಾದಲ್ಲಿ ಪ್ರಭಾಸ್-ಶ್ರದ್ಧಾ ಸೆಂಟರ್ ಆಫ್ ಅಟ್ರಾಕ್ಷನ್ ಇರಬಹುದು. ಆದರೆ ಇವರಿಗೆ ಸರಿಸಮನಾಗಿ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ನೀಲ್ ನಿತಿನ್ ಮುಖೇಶ್, ಜಾಕಿ ಶ್ರಾಫ್, ಮಂದಿರಾ ಬೇಡಿ, ಅರುಣ್ ವಿಜಯ್, ಮಹೇಶ್ ಮಂಜ್ರೇಕರ್, ಮುಂತಾದ ಘಟಾನುಘಟಿಗಳ  ಅಭಿನಯ  ನೋಡಬೇಕಾದರೆ ಸಾಹೋ ನೋಡಲೇಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಮ್ಮಿಂದಲೇ ಆಗಿದ್ದು ಪವಿತ್ರಾ ಗೌಡ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ

ದರ್ಶನ್ ಗೆ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್

ಬಹುನಿರೀಕ್ಷಿತ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಬಿಡುಗಡೆ: ಆಕ್ಷನ್ ಲುಕ್‌ನಲ್ಲಿ ಮಿಂಚಿದ ಪೃಥ್ವಿ ಅಂಬರ್

ಇದೇ 24ರಂದು ವೀರಮಲ್ಲು ರಿಲೀಸ್‌, ರಾಜಕೀಯಕ್ಕಾಗಿ ದಿಟ್ಟ ನಿರ್ಧಾರ ಕೈಗೊಂಡ ಪವನ್ ಕಲ್ಯಾಣ್

ಮೀ ಟೂನಲ್ಲಿ ಸದ್ದು ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಈಗ ಕಣ್ಣೀರು ಹಾಕುತ್ತಿರುವುದೇಕೆ

ಮುಂದಿನ ಸುದ್ದಿ
Show comments