Publish Date: Sun, 23 Jan 2022 (08:50 IST)
Updated Date: Sun, 23 Jan 2022 (09:13 IST)
ಹೈದರಾಬಾದ್: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಂ ಮೊದಲ ಬಾರಿಗೆ ತೆಲುಗಿನಲ್ಲಿ ನಟಿಸಿದ್ದು ಸೂಪರ್ ಮಚ್ಚಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇದಕ್ಕೆ ಕಾರಣ ನಾಯಕ ಕಲ್ಯಾಣ್ ದೇವ್ ಗೆ ಮಾವ ಚಿರಂಜೀವಿ ಕುಟುಂಬದ ಬೆಂಬಲ ಸಿಗದೇ ಇದ್ದಿದ್ದು ಕಾರಣವಾಯಿತೇ? ಹೀಗೊಂದು ಸುದ್ದಿ ಹಬ್ಬಿದೆ.
ಕಲ್ಯಾಣ್ ದೇವ್ ಪತ್ನಿ, ಚಿರಂಜೀವಿ ಪುತ್ರಿ ಶ್ರೀಜಾ ಜೊತೆಗಿನ ಸಂಬಂಧ ಹಳಸಿದೆ. ಎಂಬ ರೂಮರ್ ಗಳಿವೆ. ಇಬ್ಬರೂ ವಿಚ್ಛೇದನಕ್ಕೊಳಗಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರಿಂದಾಗಿಯೇ ಕಲ್ಯಾಣ್ ದೇವ್ ನಾಯಕರಾಗಿದ್ದ ಸೂಪರ್ ಮಚ್ಚಿ ಸಿನಿಮಾವನ್ನು ಚಿರು ಕುಟುಂಬ ಬೆಂಬಲಿಸಿಲ್ಲ. ಇದೇ ಕಾರಣಕ್ಕೆ ಚಿತ್ರ ಸೋತಿತು ಎನ್ನಲಾಗಿದೆ.
ಈ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಗೂ ಮೊದಲು ಒಟಿಟಿ ಫ್ಲ್ಯಾಟ್ ಫಾರಂ ಒಂದು ನೇರವಾಗಿ ಬಿಡುಗಡೆ ಮಾಡಲು 5-6 ಕೋಟಿ ರೂ. ಆಫರ್ ನೀಡಿತ್ತಂತೆ. ಆದರೆ ಅದನ್ನು ಆಗ ಚಿತ್ರತಂಡ ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಥಿಯೇಟರ್ ನಲ್ಲಿ ತೋಪೆದ್ದ ಸಿನಿಮಾ ಕೊಳ್ಳಲು ಒಟಿಟಿಯೂ ಮುಂದೆ ಬರುತ್ತಿಲ್ಲ. ಹೀಗಾಗಿ ಕಲ್ಯಾಣ್ ದೇವ್ ಸಿನಿಮಾ ತಂಡ ದಿಕ್ಕೆಟ್ಟು ಕೂತಿದೆಯಂತೆ.