Select Your Language

Notifications

webdunia
webdunia
webdunia
webdunia

ಕನ್ನಡಕ್ಕೆ ಸಾಯಿ ಪಲ್ಲವಿ ಕರೆತರಲಿದ್ದಾರಂತೆ ನಾತಿಚರಾಮಿ ನಿರ್ದೇಶಕ ಮಂಸೋರೆ

webdunia
ಭಾನುವಾರ, 23 ಜನವರಿ 2022 (08:40 IST)
ಬೆಂಗಳೂರು: ದಕ್ಷಿಣ ಭಾರತದ ಸಹಜ ಸುಂದರಿ ನಟಿ ಸಾಯಿ ಪಲ್ಲವಿ ಇದೀಗ ಕನ್ನಡ ಸಿನಿಮಾವೊಂದರಲ್ಲಿ ಅಭಿನಯಿಸಲಿದ್ದಾರಂತೆ. ಅವರನ್ನು ಕನ್ನಡಕ್ಕೆ ಕರೆತರುತ್ತಿರುವುದು ನಾತಿಚರಾಮಿ ಎಂಬ ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ಮಂಸೋರೆ.

ಸೌತ್ ಸ್ಟಾರ್ ನಟಿಗೆ ಈಗಾಗಲೇ ಕತೆಯೊಂದನ್ನು ಹೇಳಿ ಒಪ್ಪಿಸಿದ್ದಾರಂತೆ ಮಂಸೋರೆ. ಆದರೆ ಸದ್ಯಕ್ಕೆ ಅವರು ಇನ್ನೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟಕ್ಕೂ ಸಾಯಿ ಪಲ್ಲವಿಗಾಗಿ ಮಾಡಿದ ಕತೆ ಏನು ಗೊತ್ತಾ?

ಖಾಯಿದೆಯೊಂದಕ್ಕಾಗಿ ಹೋರಾಟ ಮಾಡುವ ಹೆಣ‍್ಣುಮಗಳ ಕುರಿತಾದ ಕತೆಯೊಂದನ್ನು ರೆಡಿ ಮಾಡುತ್ತಿದ್ದಾರಂತೆ ಮಂಸೋರೆ. ಇದರ ಸ್ಕ್ರಿಪ್ಟ್ ಕೆಲಸಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಅದನ್ನು ಹೋಲ್ಡ್ ಲ್ಲಿಟ್ಟಿದ್ದಾರೆ. ಆದರೆ ಸದ್ಯದಲ್ಲೇ ಈ ಸಿನಿಮಾವನ್ನೂ ಆರಂಭಿಸುವುದಾಗಿ ಹೇಳಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಮರೆತ್ರಾ ಎಂದವರಿಗೆ ಮಗಳ ಜೊತೆ ವಿಡಿಯೋ ಮೂಲಕ ಉತ್ತರ ಕೊಟ್ಟ ರಾಕಿಂಗ್ ಸ್ಟಾರ್ ಯಶ್