Publish Date: Sat, 22 Jan 2022 (16:30 IST)
Updated Date: Sat, 22 Jan 2022 (16:32 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಆಂಗ್ಲ ಭಾಷೆಯಲ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು.
ಬೆಳಗಾವಿ ವಿಚಾರದಲ್ಲಿ ಕನ್ನಡ ಪರ ಸೋಷಿಯಲ್ ಮೀಡಿಯಾದಲ್ಲಿ ಒಂದೇ ಒಂದು ಪೋಸ್ಟ್ ಮಾಡಿರಲಿಲ್ಲ. ಅಲ್ಲದೆ, ತಮ್ಮ ಹುಟ್ಟುಹಬ್ಬದಂದೂ ಇಂಗ್ಲಿಷ್ ನಲ್ಲಿಯೇ ಧನ್ಯವಾದ ಸಲ್ಲಿಸಿದ್ದರು. ಇದೆಲ್ಲಾ ಕಾರಣಕ್ಕೆ ಯಶ್ ಟ್ರೋಲ್ ಗೊಳಗಾಗಿದ್ದರು.
ಆದರೆ ಈಗ ಮಗಳು ಐರಾಗೆ ಕನ್ನಡದ ಅಕ್ಷರ ಮಾಲೆ ಕಲಿಸುವ ವಿಡಿಯೋವೊಂದನ್ನು ರಾಧಿಕಾ ಪಂಡಿತ್ ಶೇರ್ ಮಾಡಿದ್ದು, ಈ ಮೂಲಕ ಕನ್ನಡ ಮರೆತರಾ ಎಂದು ಪ್ರಶ್ನಿಸಿದವರಿಗೆ ತಿರುಗೇಟು ನೀಡಿದ್ದಾರೆ.