Select Your Language

Notifications

webdunia
webdunia
webdunia
webdunia

’ರಾಜ್ ಲೀಲಾ ವಿನೋದ’ದ ಬಗ್ಗೆ ಓದುಗರೊಬ್ಬರ ಅನಿಸಿಕೆ

’ರಾಜ್ ಲೀಲಾ ವಿನೋದ’ದ ಬಗ್ಗೆ ಓದುಗರೊಬ್ಬರ ಅನಿಸಿಕೆ
Bangalore , ಮಂಗಳವಾರ, 27 ಡಿಸೆಂಬರ್ 2016 (10:28 IST)
ರಾಜು ಮೌರ್ಯ, ದಾವಣಗೆರೆ
 
"ಡ್ಯಾನ್ಸ್ ರಾಜಾ ಡ್ಯಾನ್" ಚಿತ್ರದ ಬಿಡುಗಡೆಯ ದಿನ ಬೆಂಗಳೂರಿನ ಸಂತೋಷ್ ಚಿತ್ರಮಂದಿರದ ಮುಂದೆ ವಿನೋದ್ ರಾಜ್ ರವರ ಕಟೌಟ್ ಹಾಕಲಾಗಿತ್ತು. ಆ ಕಟೌಟ್ ಮೇಲೆ "A Star Arrives Like a THUNDER" ಎಂಬುದಾಗಿ ಬರೆದಿತ್ತು. ಮೊದಲ ದಿನ ಮೊದಲ ಷೋ ಡಾನ್ಸ್ ರಾಜಾ ಡ್ಯಾನ್ಸ್ ಚಿತ್ರವನ್ನು ನೋಡಿದ್ದೆ. 
 
ಆಗ ಬಹಳಷ್ಟು ಜನರ ಮನಸ್ಸಿನಲ್ಲಿ ಇದ್ದದ್ದು ಲೀಲಾವತಿಯವರ ಮಗ ವಿನೋದ್ ರಾಜ್ ವರನಟ ರಾಜ್ ಕುಮಾರರ ಮಗನಂತೆ ಎಂಬ ಅನುಮಾನ. ವಿನೋದ್ ರಾಜರ ಮುಗ್ಧತೆಗೆ ನ್ಯಾಯ ಸಿಗಬೇಕಿತ್ತು. 
 
108 ದಿನಗಳ ವನವಾಸ ಮುಗಿಸಿದ ನಂತರ ವಿಧಾನಸೌಧದಲ್ಲಿ ಪತ್ರಿಕೋಗೋಷ್ಟಿಯಲ್ಲಿ ಎಸ್. ಎಂ. ಕೃಷ್ಣರ ಜೊತೆ ರಾಜಣ್ಣ ಇದ್ದರು. ಆಗ ರಾಜಣ್ಣ ಮಾಧ್ಯಮಗಳಿಗೆ ಯಾವುದೋ ವಿಷಯದ ಬಗ್ಗೆ ಸತ್ಯವನ್ನು ಹೇಳಲು ಮುಂದಾದರು. ಅಲ್ಲಿಯೇ ಇದ್ದ. ಒಬ್ಬರು ರಾಜಣ್ಣನ ಕಿವಿಯಲ್ಲಿ ಏನೋ ಹೇಳಿದರು. ನಂತರ ರಾಜಣ್ಣ ಬೇರೆಯದೇ ಮಾತಿನತ್ತ ಹೊರಳಿಸಿದರು.
ಕೊನೆಗೂ ವಿನೋದರಾಜ್ ರಿಗೆ ನ್ಯಾಯ ಸಿಕ್ಕಿದೆ. 
 
ಬೇರೆ ಯಾರೋ ಈ ಸತ್ಯವನ್ನು ಹೇಳಿದ್ರೆ ನಂಬೋದಕ್ಕೆ ಆಗುತ್ತಿರಲಿಲ್ಲ. ಸ್ವತಃ ಲೀಲಾವತಿಯವರೇ ತನ್ನ ವೈಯಕ್ತಿಕ ಜೀವನದ ಬಗ್ಗೆ ಅಕ್ಷರಗಳ ರೂಪದಲ್ಲಿ ಜನರ ಮುಂದಿಟ್ಟಿದ್ದಾರೆ. ನನಗೆ ಪುಸ್ತಕ ಸಿಕ್ಕಿಲ್ಲ. ಬಹಳ ದಿನಗಳ ನಂತರ ಮತ್ತೆ ರವಿ ಬೆಳಗೆರೆಯವರ ಪುಸ್ತಕವನ್ನು ಓದುವಾಸೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ದರ್ಬಾರ್ ಬರ್ತಾ ಇದೆ? ಏನೇನಿದಿಯೋ ಒಳಗೆ!