Select Your Language

Notifications

webdunia
webdunia
webdunia
webdunia

'ರಾಜ್ ಲೀಲಾ ವಿನೋದ'ದಲ್ಲಿ ಅಂತದ್ದೇನಿದೆ?

'ರಾಜ್ ಲೀಲಾ ವಿನೋದ'ದಲ್ಲಿ ಅಂತದ್ದೇನಿದೆ?
ಬೆಂಗಳೂರು , ಸೋಮವಾರ, 26 ಡಿಸೆಂಬರ್ 2016 (16:47 IST)
ಹಿರಿಯ ನಟಿ ಲೀಲಾವತಿ ಅವರ ಆತ್ಮಕಥೆ 'ರಾಜ್ ಲೀಲಾ ವಿನೋದ' ನಿನ್ನೆ ಬಿಡುಗಡೆಯಾಗಲಿಲ್ಲ. ರಾಜ್ಯಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ ಈ ಪುಸ್ತಕ ಬಿಡುಗಡೆಯಾಗದಿರುವುದು ಸಾಕಷ್ಟು ಜನರಲ್ಲಿ ನಿರಾಸೆ ಮೂಡಿಸಿದೆ. ಆದರೆ, ಸೋಮವಾರದಿಂದ ಪುಸ್ತಕ ಮಳಿಗೆಗಳಲ್ಲಿ ಈ ಬಹು ನಿರೀಕ್ಷಿತ ಪುಸ್ತಕ ಕೈಗೆಟುಕಲಿದೆ.
ಪುಸ್ತಕದಲ್ಲಿ ನಟಿ ಲೀಲಾವತಿ ತಾವು ಬಣ್ಣದ ಹುಚ್ಚು ಅಂಟಿಸಿಕೊಂಡಿದ್ದು, ನಾಟಕ ಕಂಪನಿಗಳಲ್ಲಿನ ತಮ್ಮ ಪಯಣ,  ರಾಜ್ ಜೊತೆಗಿನ ಪ್ರೇಮಕಥನ, ಬದುಕಿನುದ್ದಕ್ಕೂ ಎದುರಿಸಿದ ಕಷ್ಟ, ಹೋರಾಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 
 
ಪುಸ್ತಕದ ಮುಖಪುಟದಲ್ಲಿ ನಟ ರಾಜಕುಮಾರ್, ಲೀಲಾವತಿ ಹಾಗೂ ಬಾಲಕ ವಿನೋದ್ ರಾಜ್ ಇರುವ ಪೋಟೋವನ್ನು ಬಳಸಲಾಗಿದ್ದು, ಶೀರ್ಷಿಕೆ ಅಡಿಯಲ್ಲಿ ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ? ಎಂದು ಬರೆಯಲಾಗಿದೆ. ಶೀರ್ಷಿಕೆ ಮತ್ತು ಮುಖಪುಟ ಜತೆಗೆ ರವಿ ಬೆಳಗೆರೆ ಪುಸ್ತಕವನ್ನು ಬರೆದಿರುವುದು "ರಾಜ್ ಲೀಲಾ ವಿನೋದ"ದ ಮೇಲೆ ಕುತೂಹಲ ಹೆಚ್ಚಲು ಕಾರಣವಾಗಿದೆ.  
 
ಲೀಲಾವತಿ ಹಾಗೂ ಡಾ.ರಾಜ್ ನಡುವಿನ ಸಂಬಂಧದ ಬಗ್ಗೆ ಹಲವು ದಶಕಗಳಿಂದ ಇದ್ದ ಸಹಜ ಕುತೂಹಲಕ್ಕೆ ಈ ಪುಸ್ತಕ ಉತ್ತರ ನೀಡಬಹುದು ಎಂಬ ನಿರೀಕ್ಷೆ ಓದುಗರದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಸಭೆ ಸದಸ್ಯತ್ವಕ್ಕೆ ಮಿಥುನ್ ಚಕ್ರವರ್ತಿ ರಾಜೀನಾಮೆ? ಯಾಕೆ ಗೊತ್ತಾ?