Select Your Language

Notifications

webdunia
webdunia
webdunia
webdunia

ಟಾಲಿವುಡ್ ಮೂಲಕ ಬೆಳ್ಳಿತೆರೆಗೆ ಮನೋಹರ್ ಪುತ್ರ

ಟಾಲಿವುಡ್ ಮೂಲಕ ಬೆಳ್ಳಿತೆರೆಗೆ ಮನೋಹರ್ ಪುತ್ರ
Hyderabad , ಸೋಮವಾರ, 26 ಡಿಸೆಂಬರ್ 2016 (10:53 IST)
ಹಲವಾರು ಹೊಸಬರನ್ನು ಪರಿಚಯಿಸಿದ ಖ್ಯಾತಿ ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಅವರದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಿರಂಜೀವಿ ಪುತ್ರ ರಾಮ್ ಚರಣ್ ಮುಂತಾದ ನಾಯಕರನ್ನಾಗಿ ಪರಿಚಯಿಸಿದ ಘನತೆ ಪುರಿಯದು.
 
ಇದೀಗ ನಿರ್ಮಾಪಕ, ರಾಜಕಾರಣಿ ಸಿ.ಆರ್.ಮನೋಹರ್ ಅವರ ಪುತ್ರ  ಇಷಾನ್‌ರನ್ನು ಬೆಳ್ಳಿತೆರೆಗೆ ತರುತ್ತಿದ್ದಾರೆ. ವಿಶೇಷ ಎಂದರೆ ಟಾಲಿವುಡ್ ಮೂಲಕ ಅವರು ಬಣ್ಣದ ಜಗತ್ತಿಗೆ ಅಡಿಯಿಡುತ್ತಿದ್ದಾರೆ. ತೆಲುಗಿನ ’ರೋಗ್’ ಚಿತ್ರದಲ್ಲಿ ಅಭಿನಯಿಸಿದ್ದು ಇನ್ನೇನು ಬಿಡುಗಡೆಯಾಗಲಿದೆ.
 
ಬೆಂಗಳೂರಿನಲ್ಲಿ ನೆಲೆಸಿರುವ ಇಷಾನ್ ಓದಿರುವುದು ಬಿ.ಟೆಕ್. ತಂದೆ ಕನ್ನಡ ಚಿತ್ರದ ನಿರ್ಮಾಪಕರಾದರೂ ತೆಲುಗು ಚಿತ್ರರಂಗ ಲಿಂಕ್ ಇದೆ. ಇನ್ನು ಪುರಿ ಜಗನ್ನಾಥ್ ಆತ್ಮೀಯ. ರೋಗ್ ಮೂಲಕ ಸಿನಿ ಜೀವನ ಆರಂಭಿಸುತ್ತಿದ್ದಾರೆ ಇಷಾನ್. 
 
ಅಮೈರಾ ದಸ್ತೂರ್ ಮತ್ತು ಆಂಗೇಲಾ ಈ ಚಿತ್ರದ ನಾಯಕಿಯರು. ಪುರಿ ಜಗನ್ನಾಥ್ ಚಿತ್ರಗಳೆಂದರೆ ಆಕ್ಷನ್, ಡಾನ್ಸ್, ರೊಮ್ಯಾನ್ಸ್‌ಗೇನು ಬರವಿರಲ್ಲ. ಇದೂ ಆ ತರಹದ್ದೇ ಒಂದು ಸಿನಿಮಾ ಎಂಬ ಮಾತುಗಳು ಕೇಳಿಬರುತ್ತಿವೆ. ಫೆಬ್ರವರಿಗೆ ಚಿತ್ರ ತೆರೆಕಾಣಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿಯಲ್ಲಿ ಬರುತ್ತಿದ್ದಾರೆ ’ರಾಜ್ ವಿಷ್ಣು’ ಜೋಡಿ