Select Your Language

Notifications

webdunia
webdunia
webdunia
webdunia

ಸ್ಯಾಂಡಲ್‌ವುಡ್‌ನಲ್ಲಿ ಇಷಾ ಕೊಪ್ಪಿಕರ್ ಸೆಕೆಂಡ್ ಇನ್ನಿಂಗ್ಸ್

ಸ್ಯಾಂಡಲ್‌ವುಡ್‌ನಲ್ಲಿ ಇಷಾ ಕೊಪ್ಪಿಕರ್ ಸೆಕೆಂಡ್ ಇನ್ನಿಂಗ್ಸ್
Bangalore , ಸೋಮವಾರ, 26 ಡಿಸೆಂಬರ್ 2016 (10:59 IST)
ಬಾಲಿವುಡ್‌ನ ಖಲ್ಲಾಸ್ ಬ್ಯೂಟಿ ಇಷಾ ಕೊಪ್ಪಿಕರ್ ಸ್ಯಾಂಡಲ್‌ವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರ ’ಲೂಟಿ’ ಚಿತ್ರ ರೆಡೆಯಾಗುತ್ತಿದ್ದು ಬೆಳ್ಳಿತೆರೆ ಅಲಂಕರಿಸುವ ದಿನಗಳು ದೂರವಿಲ್ಲ. 
 
ಹೆಸರೇ ಹೇಳುವಂತೆ ಇದೊಂದು ಹಣಕ್ಕಾಗಿ ನಡೆಯುವ ಕಥೆ. ಹಣಕ್ಕಾಗಿ ಚೇಸ್ ಮಾಡುವ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಶ್ವೇತಾ ಪಂಡಿತ್ ಸಹ ಪಾತ್ರವರ್ಗದಲ್ಲಿದ್ದಾರೆ. ಗಿರೀಶ್ ಕಂಪ್ಲಾಪುರ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. 
 
ನಿರಂಜನ್ ಎಂ.ಎನ್ ನಿರ್ಮಾಣದ ಈ ಚಿತ್ರಕ್ಕೆ ಗಂಗಾ ರಾಜೇಂದ್ರನ್ ಛಾಯಾಗ್ರಹಣ, ಧರ್ಮವಿಶ್ ಸಂಗೀತ ಇದೆ. ಈಗಾಗಲೆ ಸೆನ್ಸಾರ್ ಆಗಿದ್ದು ಯು/ಎ ಪ್ರಮಾಣ ಪತ್ರವನ್ನೂ ಪಡೆದಿದೆ ಚಿತ್ರ. ಬ್ಯಾಟ್ ಬಾಯ್ಸ್ ಆನ್ ಡ್ಯೂಟಿ ಎಂಬುದು ಚಿತ್ರದ ಅಡಿಬರಹ. 
 
ಕನ್ನಡ ಸೂರ್ಯವಂಶ ಚಿತ್ರದ ಮೂಲಕ ಸ್ಯಾಂಡಲ್‍ವುಡ್‌ಗೆ ಅಡಿಯಿಟ್ಟ ಬೆಡಗಿ ಇಶಾ ಕೊಪ್ಪಿಕರ್. ಆನಂತರ ಊ ಅಂತೀಯಾ ಊಹುಂ ಅಂತೀಯ, ಓ ನನ್ನ ನಲ್ಲೆ ಚಿತ್ರಗಳಲ್ಲಿ ಅಭಿನಯಿಸಿ ನಾಪತ್ತೆಯಾಗಿಬಿಟ್ಟರು. ಹಿಂದಿಯಲ್ಲೇ ಸೆಟ್ಲ್ ಆದರು. ಈಗ ಕನ್ನಡಿಗರ ಹೃದಯ ’ಲೂಟಿ’ ಮಾಡಲು ಅವರ ಪುನರಾಗಮನವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ಮೂಲಕ ಬೆಳ್ಳಿತೆರೆಗೆ ಮನೋಹರ್ ಪುತ್ರ