Select Your Language

Notifications

webdunia
webdunia
webdunia
webdunia

ಆರ್ ಸಿಬಿ ಬಗ್ಗೆ ಪವರ್ ಸ್ಟಾರ್ ಅಪ್ಪು ಹೇಳಿದ್ದೇನು ಗೊತ್ತಾ?

ಪುನೀತ್ ರಾಜಕುಮಾರ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ನಿಮಿತ್ತ ನಿನ್ನೆ ಸಂಜೆ ಬಿಡುಗಡೆಯಾದ ಯುವರತ್ನ ಡೈಲಾಗ್ ಟೀಸರ್ ಭರ್ಜರಿ ಸೌಂಡ್ ಮಾಡುತ್ತಿದೆ.


ಸಾಮಾನ್ಯವಾಗಿ ಪುನೀತ್ ಸಿನಿಮಾಗಳಲ್ಲಿ ಮಾಸ್ ಡೈಲಾಗ್ ಗಳು ಕಡಿಮೆ. ಆದರೆ ಇಲ್ಲಿ ಪುನೀತ್ ತಮ್ಮ ಎಂದಿನ ಡ್ಯಾನ್ಸ್, ಫೈಟ್ ಜತೆಗೆ ಭರ್ಜರಿ ಕೌಂಟರ್ ಡೈಲಾಗ್ ಗಳನ್ನೂ ಹೇಳಿದ್ದಾರೆ.

ವಿಶೇಷವೆಂದರೆ ಟೀಸರ್ ನಲ್ಲಿ ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಉಲ್ಲೇಖಿಸಲಾಗಿದೆ. ಐಪಿಎಲ್ ಸೀಸನ್ ನಲ್ಲಿ ಟೀಸರ್ ನಲ್ಲಿ ಆರ್ ಸಿಬಿ ಬಗೆಗಿನ ಡೈಲಾಗ್ ಅಭಿಮಾನಿಗಳಿಗೂ ಇಷ್ಟವಾಗಿದೆ. ಆರ್ ಸಿಬಿ ಮ್ಯಾಚ್ ಗೆದ್ದಿರಬಹುದು, ಕಪ್ ಗೆಲ್ಲಲ್ಲ ಎಂದ ಡಾಲಿ ಧನಂಜಯ್ ಡೈಲಾಗ್ ಗೆ ಪುನೀತ್ ‘ಆ ನಂಬಿಕೆ ಕಳಕೊಂಡಿಲ್ಲ, ಕಳಕೊಳ್ಳುವುದೂ ಇಲ್ಲ’ ಎಂದು ಕೌಂಟರ್ ಹೊಡೀತಾರೆ. ಇದು ಐಪಿಎಲ್ ಅಭಿಮಾನಿಗಳಿಗೆ ಈ ಬಾರಿ ಸ್ಲೋಗನ್ ಆದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾದಿಂದ ಧಾರವಾಹಿಗಳೂ ಬಂದ್?!