Publish Date: Tue, 17 Mar 2020 (09:42 IST)
Updated Date: Tue, 17 Mar 2020 (09:44 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್, ನವರಸನಾಯಕ ಜಗ್ಗೇಶ್ ಗೆ ಇಂದು ಜನ್ಮದಿನದ ಸಂಭ್ರಮ. ಆದರೆ ಕೊರೋನಾ ಭೀತಿಯಿಂದಾಗಿ ಅಭಿಮಾನಿಗಳಿಗೆ ನಿರಾಸೆ ಕಾಡಿದೆ.
ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಎಲ್ಲರ ಜತೆ ಹುಟ್ಟುಹಬ್ಬ ಆಚರಿಸಲ್ಲ. ಯಾರೂ ಮನೆಯ ಬಳಿ ಬರಬೇಡಿ ಎಂದು ಈಗಾಗಲೇ ಪುನೀತ್ ಮನವಿ ಮಾಡಿದ್ದರು. ಹೀಗಾಗಿ ಪುನೀತ್ ಅಭಿಮಾನಿಗಳಿಗೆ ನಿರಾಸೆಯಾಗಬಾರದೆಂದು ಯುವರತ್ನ ಟೀಸರ್, ಜೇಮ್ಸ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಅತ್ತ, ನವರಸನಾಯಕ ಜಗ್ಗೇಶ್ ಎಂದಿನಂತೆ ಮಂತ್ರಾಲಯಕ್ಕೆ ತೆರಳಿದ್ದು, ರಾಯರ ಸನ್ನಿಧಿಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಇಬ್ಬರೂ ನಾಯಕರಿಗೆ ಹ್ಯಾಪೀ ಬರ್ತ್ ಡೇ.