Select Your Language

Notifications

webdunia
webdunia
webdunia
webdunia

ಕೊರೋನಾವೈರಸ್ ಗೆ ಹನ್ನೆರಡು ವರ್ಷಗಳ ಹಿಂದೆಯೇ ರಜೆ ಘೋಷಿಸಿದ್ದ ನಟ ಗಣೇಶ್!

ಕೊರೋನಾವೈರಸ್ ಗೆ ಹನ್ನೆರಡು ವರ್ಷಗಳ ಹಿಂದೆಯೇ ರಜೆ ಘೋಷಿಸಿದ್ದ ನಟ ಗಣೇಶ್!
ಬೆಂಗಳೂರು , ಮಂಗಳವಾರ, 17 ಮಾರ್ಚ್ 2020 (09:46 IST)
ಬೆಂಗಳೂರು: ಕೊರೋನಾವೈರಸ್ ಇಡೀ ಜಗತ್ತನ್ನೇ ಕಂಗೆಡಿಸುತ್ತಿದೆ. ಮಾರಕ ರೋಗ ಹರಡದಂತೆ ಒಂದು ವಾರ ಕಾಲ ಕರ್ನಾಟಕ ಅಕ್ಷರಶಃ ಬಂದ್ ಆಗಿದೆ. ಆದರೆ ಕೊರೋನಾಗೆ ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್ 12 ವರ್ಷದ ಹಿಂದೆಯೇ ರಜೆ ಘೋಷಿಸಿದ್ದರು!


ಹೇಗೆ ಅಂತೀರಾ? ಸ್ವತಃ ಗಣೇಶ್ ತಮಾಷೆಯಾಗಿ ಇದನ್ನು ಹೇಳಿಕೊಂಡಿದ್ದಾರೆ. 2008 ರಲ್ಲಿ ಬಿಡುಗಡೆಯಾಗಿದ್ದ ಯೋಗರಾಜ್ ಭಟ್-ಗಣಿ ಅಭಿನಯದ ‘ಗಾಳಿಪಟ’ ಸಿನಿಮಾದಲ್ಲಿ ಟೀಚರ್ ಆಗಿರುವ ನಾಯಕಿ ಕೆಮ್ಮಿದಾಗ ನಾಯಕ ಗಣೇಶ್ ‘ಟೀಚರ್ ಕೆಮ್ತಾವವ್ರೆ. ಒಂದು ವಾರ ಸ್ಕೂಲ್ ಗೆ ರಜಾ’ ಅಂತ ಎಲ್ಲರನ್ನೂ ಮನೆಗೆ ಕಳುಹಿಸುತ್ತಾರೆ.

ಈ ದೃಶ್ಯದ ವಿಡಿಯೋ ಪ್ರಕಟಿಸಿರುವ ಗಣೇಶ್ ‘ಕೊರೋನಾಗೆ ಒಂದು ವಾರ ರಜಾ ಕೊಟ್ಟಿದ್ದರ ನಿಜ ಕಾರಣ. ಎಲ್ಲಾ ಕೊರೋನಾ ಮಹಿಮೆ’ ಎಂದು ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಜಗ್ಗೇಶ್ ಗೆ ಇಂದು ಜನ್ಮದಿನ ಸಂಭ್ರಮ