ಸರಣಿ ರದ್ದಾದರೂ ಭಾರತದಲ್ಲೇ ಇರುವ ದ.ಆಫ್ರಿಕಾ ಕ್ರಿಕೆಟಿಗರು

ಸೋಮವಾರ, 16 ಮಾರ್ಚ್ 2020 (09:57 IST)
ಮುಂಬೈ: ಕೊರೋನಾವೈರಸ್ ಭೀತಿಯಿಂದಾಗಿ ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ರದ್ದಾಗಿದೆ. ಹಾಗಿದ್ದರೂ ದ.ಆಫ್ರಿಕಾ ಕ್ರಿಕೆಟಿಗರು ಇನ್ನೂ ಭಾರತದಲ್ಲೇ ಉಳಿದುಕೊಂಡಿದ್ದಾರೆ.


ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯ ರದ್ದಾದ ಬಳಿಕ ಆಫ್ರಿಕಾ ಕ್ರಿಕೆಟಿಗರು ಲಕ್ನೋಗೆ ಬಂದಿದ್ದರು. ಆದರೆ ಇದೇ ಸಂದರ್ಭದಲ್ಲಿ ಸರಣಿ ರದ್ದಾದ ಸುದ್ದಿ ಬಂದಿತ್ತು. ಹಾಗಿದ್ದರೂ ಅಲ್ಲಿಯೇ ಉಳಿದುಕೊಂಡಿದ್ದು ಹೋಟೆಲ್ ಬಿಟ್ಟು ತೆರಳಿರಲಿಲ್ಲ.

ಇಂದು ಕೋಲ್ಕೊತ್ತಾಗೆ ಆಗಮಿಸಲಿರುವ ಕ್ರಿಕೆಟಿಗರು ಅಲ್ಲಿಂದ ದುಬೈ ಮಾರ್ಗವಾಗಿ ತಮ್ಮ ಸ್ವದೇಶಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೋಹಿತ್, ಕೊಹ್ಲಿ ಮೀರಿದ ಕೆಎಲ್ ರಾಹುಲ್