Publish Date: Mon, 10 Feb 2020 (09:25 IST)
Updated Date: Mon, 10 Feb 2020 (09:27 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ಕೊನೆಯ ಹಂತದಲ್ಲಿ ಇದೀಗ ಖ್ಯಾತ ಬಾಲಿವುಡ್ ನಟಿ ಚಿತ್ರತಂಡವನ್ನು ಕೂಡಿಕೊಂಡಿದ್ದಾರೆ.
ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕೆಜಿಎಫ್ 2 ನಲ್ಲಿ ಈಗಾಗಲೇ ಸಂಜಯ್ ದತ್ ಅಭಿನಯಿಸಿದ್ದಾರೆ. ಇದೀಗ ಮತ್ತೊಬ್ಬ ಬಾಲಿವುಡ್ ನಟಿ ರವೀನಾ ಟಂಡನ್ ಆಗಮನವಾಗಿದೆ.
ಆದರೆ ರವೀನಾ ಪಾತ್ರವೇನು ಎಂಬ ಬಗ್ಗೆ ಚಿತ್ರತಂಡ ಇದುವರೆಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ ಕೆಜಿಎಫ್ ಸೆಟ್ ನಲ್ಲಿ ಪ್ರಶಾಂತ್ ನೀಲ್ ಜತೆಗಿರುವ ರವೀನಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.