Publish Date: Wed, 12 Jun 2024 (19:40 IST)
Updated Date: Wed, 12 Jun 2024 (19:48 IST)
ಬೆಂಗಳೂರು: ನಗರದಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ತೆಲುಗು ನಟಿ ಹೇಮಾ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ರೇವ್ ಪಾರ್ಟಿ ಪ್ರಕರಣದಲ್ಲಿ ಬಂಧಿಯಾಗಿದ್ದ ಹೇಮಾ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು, ಅದರ ಅನ್ವಯ ಇದೀಗ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಇತ್ತೀಚೆಗೆ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ನಟಿ ಭಾಗಿಯಾಗಿದ್ದರು. ಇನ್ನೂ ಈ ಪ್ರಕರಣದಲ್ಲಿ ಜಾರಿಕೊಳ್ಳಲು ನಟಿ ಹೈಡ್ರಾಮಾ ಮಾಡಿದ್ದರು. ಆದರೆ ರಕ್ತದ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಮಾಡಿರುವುದಾಗಿ ದೃಢಪಟ್ಟಿತ್ತು. ಇನ್ನೂ ತನಿಖೆಗೆ ಹಾಜರಾಗುವಂತೆ ಹೇಮಾಗೆ ಎರಡು ಬಾರಿ ನೋಟಿಸ್ ನೀಡಿದ್ದರು ಅದಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದರು. ವಿಚಾರಣೆಗೆ ಬಂದ ಹೇಮಾರನ್ನು ಪೊಲೀಸರು ಬಂಧಿಸಿದ್ದರು.
ಬಳಿಕ ಜೂನ್ 14ರವರೆಗೆ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಧೀಶರಾದ ಸಲ್ಮಾ ಎ.ಎಸ್ ಅವರಿದ್ದ ಪೀಠ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಈಗ ನಟಿಗೆ ಜಾಮೀನು ಸಿಕ್ಕಿದ್ದು, ತಕ್ಕ ಮಟ್ಟಿಗೆ ರಿಲ್ಯಾಕ್ಸ್ ಆಗಿದ್ದಾರೆ.