Select Your Language

Notifications

webdunia
webdunia
webdunia
Wednesday, 9 April 2025
webdunia

ಒಂದೇ ಒಂದು ಸಿಗರೇಟ್‌ಗಾಗಿ ಪೊಲೀಸ್‌ ಮುಂದೆ ಅಂಗಲಾಚುತ್ತಿರುವ ದರ್ಶನ್‌

Cigarette

sampriya

ಬೆಂಗಳೂರು , ಬುಧವಾರ, 12 ಜೂನ್ 2024 (19:26 IST)
Photo By X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 13 ಮಂದಿ ಆರೋಪಿಗಳನ್ನು ಕರೆದೊಯ್ದು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು ಮಾಡಲಾಗಿದೆ. ಇನ್ನೂ ವಿಚಾರಣೆ ಎದುರಿಸುತ್ತಿರುವ ದರ್ಶನ್‌ ಅವರು ಪೊಲೀಸರ ಮುಂದೆ ಸಿಗರೇಟ್‌ ನೀಡುವಂತೆ ಬೇಡಿಕೊಳ್ಳುತ್ತಿದ್ದಾರೆಂಬ ಮಾಹಿತಿ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಿನ್ನೆ ನಟ ದರ್ಶನ್‌ ಹಾಗೂ 13ಮಂದಿ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಚುರುಕು ಮಾಡಿದ್ದಾರೆ. ಅದಲ್ಲದೆ ನಟ ದರ್ಶನ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಚಿತ್ರದುರ್ಗಾದಲ್ಲಿ ಇಂದು ಪ್ರತಿಭಟನೆ ನಡೆಸಲಾಗಿದೆ.

ಇನ್ನೂ ವಿಚಾರಣೆ ವೇಳೇ ಸಿಗರೇಟ್‌ ಇಲ್ಲದೆ ಕೈ ಕಾಲು ನಡುಗುತ್ತಿದ್ದು, ದಯಾಮಾಡಿ ಒಂದೇ ಒಂದು ಸಿಗರೇಟ್‌ ನೀಡುವಂತೆ ಪೊಲೀಸರಲ್ಲಿ ದರ್ಶನ್‌ ಅಂಗಲಾಚಿದ್ದಾರೆ. ಅದಲ್ಲದೆ ಪೊಲೀಸರು ಸಿಗರೇಟ್‌ ಕೊಡಿಸಲು ಸಾಧ್ಯವಿಲ್ಲವೆಂದು ಹೇಳಿ ದರ್ಶನ್‌ ಮೇಲೆ ಗರಂ ಆಗಿದ್ದಾರೆಂಬ ಮಾಹಿತಿಯಿದೆ.

ಇನ್ನೂ ಪೊಲೀಸ್‌ ಕಸ್ಟಡಿಯ ವಿಚಾರಣೆಯಲ್ಲಿರುವ ದರ್ಶನ್‌ಗೆ ರೇಣುಕಾಸ್ವಾಮಿ ಹತ್ಯೆ ಸಂಬಂಧ ಹಲವಾರು ಪ್ರಶ್ನೆಗಳನ್ನು ಮಾಡುತ್ತಿದ್ದರು ನಾನು ಏನು ತಪ್ಪು ಮಾಡಿಲ್ಲ ಎಂಬ ಉತ್ತರವನ್ನು ನೀಡುತ್ತಿದ್ದಾರಂತ್ತೆ. ನಾನು ಈ ಕೊಲೆ ಮಾಡಿಲ್ಲ, ಮಾಡಿಸಿಯೂ ಇಲ್ಲ ಎಂಬುದನ್ನಷ್ಟೇ ಪುನರ್‌ ಉಚ್ಚರಿಸುತ್ತಾರೆಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. 



Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್‌ ಬಿಡುಗಡೆ ಮಾಡಿದ್ದಲ್ಲಿ ಉಗ್ರ ಹೋರಾಟ: ಮಾಜಿ ಶಾಸಕ ಜಿ ಎಚ್‌ ತಿಪ್ಪಾರೆಡ್ಡಿ