Select Your Language

Notifications

webdunia
webdunia
webdunia
webdunia

ಹತ್ಯೆ ಪ್ರಕರಣ: ದರ್ಶನ್‌, ಪವಿತ್ರಾ ಗೌಡ ಜತೆ ಎಲ್ಲ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು

Pavitra Gowda

sampriya

ಬೆಂಗಳೂರು , ಬುಧವಾರ, 12 ಜೂನ್ 2024 (17:24 IST)
Photo By X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌, ಪವಿತ್ರಾಗೌಡ ಸೇರಿದಂತೆ 13 ಆರೋಪಿಗಳನ್ನು ಪಟ್ಟನಗೆರೆಯ ಶೆಡ್‌ಗೆ ಕರೆದೊಯ್ದು ಪೊಲೀಸರು ಸ್ಥಳ ಮಹಜರು ಮಾಡಿದರು.

ಹಲ್ಲೆ ಮಾಡಲು ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ಕಿಡ್ನ್ಯಾಪ್‌ ಮಾಡಿ ರೇಣುಕಾಸ್ವಾಮಿಯನ್ನು ಇದೇ ಶೆಡ್ ಗೆ ಕರೆದೊಯ್ದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದರು. ಹೀಗಾಗಿ ಅಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಎಫ್ಎಸ್ಎಲ್ ತಂಡ ಹಾಗೂ ಪೊಲೀಸರು ಮುಂದಾಗಿದ್ದಾರೆ.

ಇತ್ತೀಚೆಗಷ್ಟೇ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾಗೌಡ, ನಿಖಿಲ್, ವಿನಯ್, ಕಾರ್ತಿಕ್ ಮತ್ತು ರಾಘವೇಂದ್ರ ಸೇರಿದಂತೆ 13 ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದ್ದು ನಿನ್ನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣಗೆರೆಯ ಶೆಡ್ ನಲ್ಲಿ ಹತ್ಯೆ ಮಾಡಿದ ಬಲಿಕ ಆರೋಪಿಗಳ ಪೈಕಿ ನಾಲ್ವರು ಶವವನ್ನು ಸುಮನಹಳ್ಳಿಯ ಬಳಿ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. ಈ ಪ್ರಕರಣ ರಾಜ್ಯವನ್ನೇ ಬಿಚ್ಚಿಬೀಳಿಸಿದ್ದು, ನಟ ದರ್ಶನ್‌ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಡ ಹೆಚ್ಚಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ಬಿಜೆಪಿ ನಾಯಕಿ ತಮಿಳ್ ಸಾಯಿಗೆ ವೇದಿಕೆಯಲ್ಲೇ ಕ್ಲಾಸ್ ತೆಗೆದುಕೊಂಡ ಅಮಿತ್ ಶಾ