Select Your Language

Notifications

webdunia
webdunia
webdunia
webdunia

ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟಿ ಹೇಮಾ, ಆಶಿ ರಾಯ್ ಡ್ರಗ್ಸ್ ಸೇವಿಸಿರುವುದು ದೃಢ

Hema-Ashi Roy

Krishnaveni K

ಬೆಂಗಳೂರು , ಗುರುವಾರ, 23 ಮೇ 2024 (13:33 IST)
Photo Courtesy: X
ಬೆಂಗಳೂರು: ಬೆಂಗಳೂರಿನ ಜಿಆರ್ ಫಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಸಿಕ್ಕಿಹಾಕಿಕೊಂಡ ತೆಲುಗು ನಟಿಯರಾದ ಹೇಮಾ ಮತ್ತು ಆಶಿ ರಾಯ್ ಡ್ರಗ್ಸ್ ಸೇವನೆ ಮಾಡಿರುವುದು ನಿಜ ಎಂದು ದೃಢಪಟ್ಟಿದೆ.

ಪಾರ್ಟಿಯಲ್ಲಿ ಭಾಗಿಯಾಗಿದ್ದ ಇಬ್ಬರ ರಕ್ತ ಮತ್ತು ಕೂದಲು ಸ್ಯಾಂಪಲ್ ಗಳನ್ನು ಪಡೆದಿದ್ದ ಪೊಲೀಸರು ಪರೀಕ್ಷೆಗೊಳಪಡಿಸಿದ್ದರು. ಇದೀಗ ಬ್ಲಡ್ ರಿಪೋರ್ಟ್ ಬಂದಿದ್ದು ಇಬ್ಬರೂ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಒಟ್ಟು 103 ಮಂದಿ ಪೈಕಿ 86 ಮಂದಿ ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ.

ಇದೀಗ ಪಾರ್ಟಿಯಿಂದ ತಪ್ಪಿಸಿಕೊಂಡು ಓಡಿ ಹೋದ ಎಲ್ಲರನ್ನೂ ಕರೆಸಿ ವಿಚಾರಣೆಗೊಳಪಡಿಸಲು ತೀರ್ಮಾನಿಸಿದ್ದಾರೆ. ಪೊಲೀಸ್ ರೇಡ್ ಆಗುತ್ತಿದ್ದಂತೇ ತೆಲುಗು ನಟಿಯರು ಮುಖ ಮುಚ್ಚಿಕೊಂಡು ಪರಾರಿಯಾಗಿದ್ದರು. ಸಿಸಿಬಿ ಪೊಲೀಸರ ತಂಡ ಒಟ್ಟು 98 ಮಂದಿಯ ರಕ್ತದ ಸ್ಯಾಂಪಲ್ ಪರೀಕ್ಷೆಗೊಳಪಡಿಸಿತ್ತು. ಆ ಪೈಕಿ 59 ಪುರುಷರು ಮತ್ತು 27 ಯುವತಿಯರ ಪರೀಕ್ಷೆ ವರದಿ ಪಾಸಿಟಿವ್ ಎಂದು ಬಂದಿದೆ.

ಐಟಿ ಸಿಟಿಯಲ್ಲಿ ನಡೆದಿದ್ದ ಡ್ರಗ್ಸ್ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೀಗ ಪಾಸಿಟಿವ್ ವರದಿ ಬಂದಿರುವ ಎಲ್ಲರಿಗೂ ಕಾನೂನಿನ ಕುಣಿಕೆ ಬಿಗಿಯಾಗಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇನ್ನೂ ಹಲವರು ತಪ್ಪಿಸಿಕೊಂಡಿದ್ದು ಅವರೆಲ್ಲರನ್ನೂ ಪರೀಕ್ಷೆಗೊಳಪಡಿಸಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲೆಕ್ಷನ್ ಮುಗಿಯಿತು, ಇನ್ನು ಕೆಲಸ ಮಾಡಿ: ಅಧಿಕಾರಿಗಳಿಗೆ ಸಿಎಂ ತಾಕೀತು