Select Your Language

Notifications

webdunia
webdunia
webdunia
webdunia

ರೇವ್‌ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ ಅರೆಸ್ಟ್

Telugu actress Hema

sampriya

ಬೆಂಗಳೂರು , ಸೋಮವಾರ, 3 ಜೂನ್ 2024 (17:54 IST)
ಬೆಂಗಳೂರು: ರೇವ್‌ ಪಾರ್ಟಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎರಡು ಸಲ ನೋಟಿಸ್‌ ಕೊಟ್ಟರು ಹಾಜರಾಗದೆ ತಪ್ಪಿಸಿಕೊಂಡಿದ್ದ ತೆಲುಗು ನಟಿ ಹೇಮಾ ಅವರನ್ನು ಇಂದು ಬಂಧಿಸಲಾಗಿದೆ.

ಬೆಂಗಳೂರು ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ಅವರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ವಿಚಾರಣೆ ನಡೆಸಿದ ನಂತರ ಸೋಮವಾರ ಬಂಧಿಸಿದ್ದಾರೆ.

ಮೊನ್ನೆ ಸೋಮವಾರ ಬೆಂಗಳೂರು ಸಿಸಿಬಿ ಪೊಲೀಸರು ತೆಲುಗು ನಟಿ ಹೇಮಾ ಸೇರಿದಂತೆ ಎಂಟು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದರು.

ಮೇ 22 ರಂದು, ನಗರದ ಹೊರವಲಯದಲ್ಲಿ ಇತ್ತೀಚೆಗೆ ನಡೆದ ರೇವ್ ಪಾರ್ಟಿಯಲ್ಲಿ ಕನಿಷ್ಠ 86 ಜನರು ಡ್ರಗ್ಸ್‌ ಸೇವನೆ ಮಾಡಿರುವುದಾಗಿ ದೃಢಪಟ್ಟಿತ್ತು.  ಕರ್ನಾಟಕ ಪೊಲೀಸ್‌ನ ಮಾದಕ ದ್ರವ್ಯ ನಿಗ್ರಹ ವಿಭಾಗವು ದಾಳಿ ನಡೆಸಿದ ರೇವ್ ಪಾರ್ಟಿಯಲ್ಲಿ ಇಬ್ಬರು ತೆಲುಗು ನಟರು ಸೇರಿದಂತೆ 73 ಪುರುಷರು ಮತ್ತು 30 ಮಹಿಳೆಯರು ಸೇರಿದಂತೆ ಹಲವರು ಹಾಜರಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಮಾಂತ್ರಿಕ ಮಣಿರತ್ನಂ ಅವರ ನೋಡಲೇ ಬೇಕಾದ 5 ಸಿನಿಮಾಗಳು