Select Your Language

Notifications

webdunia
webdunia
webdunia
webdunia

ರತ್ನಮಂಜರಿ: ಕೊಡಗಿನ ನಿಜವಾದ ಸೌಂದರ್ಯ ಸೆರೆಯಾಗಿದೆ ಇಲ್ಲಿ!

ರತ್ನಮಂಜರಿ: ಕೊಡಗಿನ ನಿಜವಾದ ಸೌಂದರ್ಯ ಸೆರೆಯಾಗಿದೆ ಇಲ್ಲಿ!
ಬೆಂಗಳೂರು , ಶನಿವಾರ, 11 ಮೇ 2019 (18:05 IST)
ಪ್ರಸಿದ್ಧ ನಿರ್ದೇಶನದ ರತ್ನಮಂಜರಿ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ ಹದಿನೇಳನೇ ತಾರೀಕಿನಂದು ಎಲ್ಲೆಡೆ ಮಡುಗಟ್ಟಿಕೊಂಡಿರೋ ಕುತೂಹಲಕ್ಕೂ ತೆರೆ ಬೀಳಲಿದೆ.

ಆದರೆ ಈಗ ಯಾವ್ಯಾವ ದಿಕ್ಕಿನಿಂದ ಪ್ರೇಕ್ಷಕರು ಈ ಸಿನಿಮಾ ಮೇಲೆ ಮೋಹಗೊಂಡಿದ್ದಾರೋ, ಅದನ್ನು ನೂರ್ಮಡಿಗೊಳಿಸುವಂಥಾ ವಿಶೇಷತೆಗಳನ್ನ ಈ ಚಿತ್ರ ಒಳಗೊಂಡಿದೆ. ಇಂಥಾದ್ದೊಂದು ಭರವಸೆ ಚಿತ್ರತಂಡದಲ್ಲಿ ಲಕಲಕಿಸುತ್ತಿದೆ.
webdunia
ನಟರಾಜ್ ಹಳೆಬೀಡು, ಸಂದೀಪ್ ಕುಮಾರ್, ಡಾ. ನವೀನ್ ನಿರ್ಮಾಣದ ಈ ಚಿತ್ರ ಕನ್ನಡದ ಮಟ್ಟಿಗೆ ಅತ್ಯಂತ ಹೊಸತಾದ, ಎಂಥವರೂ ಬೆರಗಾಗುವಂಥಾ ಚೆಂದದ ಕಥಾ ಹಂದರವಿದೆ. ತಾಂತ್ರಿಕವಾಗಿಯೂ ಹಾಲಿವುಡ್ ಗ್ಫಿಮತ್ರಿಕ ಶ್ರೀಮಂತಿಕೆ ಹೊಂದಿರೋ ರತ್ನಮಂಜರಿಯ ವಿಶೇಷತೆಗಳನ್ನು ಒಂದೇ ಸಲಕ್ಕೆ ಪಟ್ಟಿ ಮಾಡೋದು ಕಷ್ಟದ ಸಂಗತಿ. ಆದರೆ ಚಿತ್ರೀಕರಣದ ಹಂತದಲ್ಲಿಯೇ ಹಲವಾರು ವಿಚಾರಗಳು ಚಿತ್ರತಂಡವನ್ನು ಕಾಡಿವೆ. ಅದೆಲ್ಲದರಾಚೆಗೂ ಕೊಡಗಿನ ಪ್ರಕೃತಿಯನ್ನು ಮಜವಾಗಿ ಸೆರೆ ಹಿಡಿದಿರೋದೂ ಕೂಡಾ ಈ ಸಿನಿಮಾ ವಿಶೇಷತೆಗಳಲ್ಲೊಂದು.
webdunia
ಮಳೆಯೂ ಸೇರಿದಂತೆ ಪ್ರತಿಯೊಂದನ್ನೂ ಸಹಜವಾಗಿಯೇ ಸೆರೆ ಹಿಡಿಯಬೇಕನ್ನೋದು ಚಿತ್ರತಂಡದ ಆಸೆಯಾಗಿತ್ತು. ನಿರ್ದೇಶಕ ಪ್ರಸಿದ್ಧ್ ಅವರ ಕನಸದು. ಆದ್ದರಿಂದಲೇ ಕೊಡಗಿನ ಸೌಂದರ್ಯ ಪರಿಣಾಮಕಾರಿಯಾಗಿ ಸೆರೆಯಾಗಿದೆ. ಆ ಪ್ರಾಕೃತಿಕ ವೈಭವದ ಗರ್ಭದಲ್ಲಿಯೇ ಈ ಸಿನಿಮಾದ ಅರ್ಧದಷ್ಟು ಕಥೆ ಸಾಗುತ್ತದೆಯಂತೆ.
webdunia
ಹೀಗೆ ಧ್ಯಾನದಂತೆ ಕೊಡಗಿನಲ್ಲಿ ಚಿತ್ರೀಕರಣ ನಡೆಸಿದ್ದ ಚಿತ್ರತಂಡ ಬೆಂಗಳೂರಿಗೆ ವಾಪಾಸಾದ ಎರಡ್ಮೂರು ದಿನಗಳಲ್ಲಿಯೇ ಮಹಾ ಪ್ರಾಕೃತಿಕ ದುರಂತ ಸಂಭವಿಸಿತ್ತು. ರತ್ನಮಂಜರಿಗೆ ಚಿತ್ರೀಕರಣ ನಡೆಸಿದ್ದ ಸ್ಥಳಗಳೆಲ್ಲವೂ ಭೂಕುಸಿತಕ್ಕೆ ಬಲಿಯಾಗಿದ್ದವು. ಇದು ಚಿತ್ರತಂಡಕ್ಕೆ ಎದುರಾಗಿದ್ದ ಮಹಾ ಆಘಾತ. ಆದರೆ ಕೊಡಗನ್ನು ಸಹಜ ಸ್ಥಿತಿಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಈ ಚಿತ್ರದ ಮೂಲಕವೇ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರತ್ನಮಂಜರಿ: ಟೆಂಟ್ ಸಿನಿಮಾದಿಂದ ಬಂದ ನಾಯಕ ನಾಯಕಿ!