Select Your Language

Notifications

webdunia
webdunia
webdunia
Sunday, 6 April 2025
webdunia

ಆದಾಯ ತೆರಿಗೆ ದಾಳಿಗೆ ಹೆದರಿ ಮೋದಿಯನ್ನು ಹೊಗಳಿದಿರಾ? ರಶ್ಮಿಕಾ ಮಂದಣ್ಣಗೆ ಟೀಕೆ

Rashmika Mandanna

Krishnaveni K

ಮುಂಬೈ , ಶುಕ್ರವಾರ, 17 ಮೇ 2024 (11:39 IST)
Photo Courtesy: Twitter
ಮುಂಬೈ: ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಕಳೆದ 10 ವರ್ಷಗಳಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಅಭಿವೃದ್ಧಿಗೆ ನೋಡಿ ಮತ ಹಾಕಿ ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ಈಗ ಎಡಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ.

ನವಿ ಮುಂಬೈನಿಂದ ಮುಂಬೈಗೆ ಸಂಪರ್ಕ ನೀಡುವ ಅಟಲ್ ಸೇತು ಯೋಜನೆಯನ್ನು ಹೊಗಳಿದ್ದ ರಶ್ಮಿಕಾ ಕಳೆದ 10 ವರ್ಷಗಳಲ್ಲಿ ದೇಶ ಸಾಕಷ್ಟು ಸಾಧನೆ ಮಾಡಿದೆ ಎಂದಿದ್ದರು. ಆ ಮೂಲಕ ಪ್ರಧಾನಿ ಮೋದಿ ನೇತೃತ್ವದ ಆಡಳಿತವನ್ನು ಹೊಗಳಿದ್ದರು. ಆದರೆ ಅವರು ಇಂತಹದ್ದೊಂದು ಹೇಳಿಕೆ ನೀಡುತ್ತಿದ್ದಂತೇ ಎಡಪಂಥೀಯರು, ವಿಚಾರವಾದಿಗಳ ಕಣ್ಣು ಕೆಂಪಾಗಿದೆ.

ರಶ್ಮಿಕಾ ಹೇಳಿಕೆಗೆ ಟಾಂಗ್ ಕೊಟ್ಟಿರುವ ಸ್ಯಾಂಡಲ್ ವುಡ್ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಅಸಮಾನತೆ ಗಗನಕ್ಕೇರಿದೆ, ಕಾಂಕ್ರೀಟ್ ಸುರಿದು ಕಟ್ಟಡ ನಿರ್ಮಾಣವನ್ನು ಯಾವ ಪಕ್ಷ ಬೇಕಾದರೂ ಮಾಡಬಹುದು ಎಂದಿದ್ದಾರೆ.

ರಶ್ಮಿಕಾ ಟ್ವೀಟ್ ನ್ನು ಮೋದಿ ರಿ ಟ್ವೀಟ್ ಮಾಡಿದ ಮೇಲಂತೂ ಮತ್ತಷ್ಟು ಜನ ಕಾಲೆಳೆದಿದ್ದಾರೆ. ರಶ್ಮಿಕಾ ಆದಾಯ ತೆರಿಗೆ ಇಲಾಖೆ ದಾಳಿಗೊಗಾಗುವ ಭಯದಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಒಬ್ಬ ಎಕ್ಸ್ ಬಳಕೆದಾರ ಟೀಕೆ ಮಾಡಿದ್ದಾರೆ. ಮತ್ತೆ ಕೆಲವರು ರಶ್ಮಿಕಾರನ್ನು ಬೆಂಬಲಿಸಿದ್ದು, ಆಕೆಯನ್ನು ವಿರೋಧಿಸುವವರನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೈ ಮುರಿದಿದ್ದರೂ ಕ್ಯಾನ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್