ನವದೆಹಲಿ: ಕಳೆದ 10 ವರ್ಷಗಳಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅಭಿವೃದ್ಧಿಗೆ ಮತ ನೀಡಿ ಎಂದು ರಶ್ಮಿಕಾ ಮಂದಣ್ಣ ನೀಡಿದ್ದ ಸಂದೇಶ ಈಗ ಪ್ರಧಾನಿ ಮೋದಿ ಗಮನಸೆಳೆದಿದೆ. 
									
			
			 
 			
 
 			
					
			        							
								
																	ರಶ್ಮಿಕಾ ಟ್ವೀಟ್ ನ್ನು ರಿಟ್ವೀಟ್ ಮಾಡಿರುವ ಮೋದಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ದೊಡ್ಡದಾಗಿ ಕನಸು ಕಾಣಲು ಸಾಧ‍್ಯವಿಲ್ಲ ಎನ್ನುತ್ತಿದ್ದಾರೆ. ಆದರೆ ಈ ಅಟಲ್ ಸೇತುವೆಯನ್ನು ಕೇವಲ ಏಳೆಂಟು ವರ್ಷಗಳಲ್ಲಿ ನಿರ್ಮಾಣ ಮಾಡಲಾಗಿದೆ. ಇದರಿಂದ ಪ್ರಯಾಣದ ಅವಧಿ 20 ನಿಮಿಷಕ್ಕೆ ಇಳಿದಿದೆ. ಯುವ ಭಾರತಕ್ಕೆ ಇದೇ ಗ್ಯಾರಂಟಿ. ಈ ರೀತಿಯ ನೂರಾರು ಅಟಲ್ ಸೇತುವೆ ನಿರ್ಮಾಣವಾಗಬೇಕು ಎಂದರೆ ಅಭಿವೃದ್ಧಿಗೆ ಮತ ಹಾಕಿ ಎಂದು ರಶ್ಮಿಕಾ ಟ್ವೀಟ್ ಮಾಡಿದ್ದರು.
									
										
								
																	ಅವರ ಟ್ವೀಟ್ ಪ್ರಧಾನಿ ಮೋದಿಯನ್ನೂ ತಲುಪಿದೆ. ರಶ್ಮಿಕಾ ಟ್ವೀಟ್ ನ್ನು ರಿಟ್ವೀಟ್ ಮಾಡಿರುವ ಮೋದಿ ಖಂಡಿತಾ ಜನರ ಸಂಪರ್ಕ ಮತ್ತು ಪ್ರಯಾಣ ಸುಧಾರಿಸುವುದಕ್ಕಿಂತ ತೃಪ್ತಿಕರ ಕೆಲಸ ಮತ್ತೊಂದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮೋದಿ ಮಾಡಿರುವ ಈ ಟ್ವೀಟ್ ಎಲ್ಲರ ಗಮನ ಸೆಳೆದಿದೆ.
									
											
							                     
							
							
			        							
								
																	ಅಟಲ್ ಸೇತು ಭಾರತದ ಅತ್ಯಂತ ಉದ್ದನೆಯ ಸಮುದ್ರ ಸೇತುವೆಯಾಗಿದೆ. ಇದು ಮುಂಬೈ ಮತ್ತು ನವಿ ಮುಂಬೈ ನಡುವೆ ಸಂಪರ್ಕ ಸಾಧಿಸುತ್ತದೆ. ಮೊದಲು ಈ ಎರಡೂ ಸ್ಥಳಗಳ ನಡುವಿನ ದೂರ ಎರಡೂವರೆ ಗಂಟೆಗಳಾಗಿತ್ತು. ಆದರೆ ಈಗ ಕೇವಲ 20 ನಿಮಿಷ ಸಾಕಾಗುತ್ತಿದೆ.