ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟು ಆಗಷ್ಟೇ ಹೆಸರು ಮಾಡಿದ್ದರು. ಆಗ ಸಂದರ್ಶನವೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹಗುರವಾಗಿ ಮಾತನಾಡಿ ತೀವ್ರ ಟ್ರೋಲ್ ಗೊಳಗಾಗಿದ್ದರು. ಆದರೆ ಇಂದು ಅದೇ ಯಶ್ ನಾಯಕರಾಗಿರುವ ಕೆಜಿಎಫ್ 2 ಸಿನಿಮಾವನ್ನು ರಶ್ಮಿಕಾ ಹಾಡಿ ಹೊಗಳಿದ್ದಾರೆ.
ಅಷ್ಟೇ ಅಲ್ಲ, ಕನ್ನಡ ಸಿನಿಮಾದ ಟ್ರೈಲರ್ ಮೆಚ್ಚಿಕೊಂಡಿದ್ದಕ್ಕೆ ನೆಟ್ಟಿಗರು ರಶ್ಮಿಕಾರನ್ನು ಟ್ರೋಲ್ ಮಾಡಿದ್ದಾರೆ. ಆವತ್ತು ಕನ್ನಡ ಸಿನಿಮಾವನ್ನೇ ಕಡೆಗಣಿಸಿ ಬೇರೆ ಭಾಷೆಯಲ್ಲಿ ಮಿಂಚಲು ಹೋದ್ರಿ. ಈವತ್ತು ಅದೇ ಕನ್ನಡ ಸಿನಿಮಾವನ್ನೇ ಹೊಗಳುವ ಪರಿಸ್ಥಿತಿ ನಿಮಗೆ ಬಂದಿದೆ ಎಂದು ಕೆಲವರು ಲೇವಡಿ ಮಾಡಿದ್ದಾರೆ.
ಏನು ಮುಂದಿನ ಸಿನಿಮಾ ಪ್ರಶಾಂತ್ ನೀಲ್ ಜೊತೆಗೆನಾ? ಎಂದು ಇನ್ನು ಕೆಲವರು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಈ ಮೊದಲು ಬಿಡುಗಡೆಯಾದ ಆರ್ ಆರ್ ಆರ್ ಸಿನಿಮಾ ಬಗ್ಗೆ ಯಾವುದೇ ಮಾತೂ ಹೇಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.