Select Your Language

Notifications

webdunia
webdunia
webdunia
webdunia

ಯಶ್ ಹೇಳಿಕೆಯಿಂದ ತಣ್ಣಗಾಗುತ್ತಾ ಬೀಸ್ಟ್/ಕೆಜಿಎಫ್ 2 ವಾರ್

ಯಶ್ ಹೇಳಿಕೆಯಿಂದ ತಣ್ಣಗಾಗುತ್ತಾ ಬೀಸ್ಟ್/ಕೆಜಿಎಫ್ 2 ವಾರ್
ಬೆಂಗಳೂರು , ಮಂಗಳವಾರ, 29 ಮಾರ್ಚ್ 2022 (08:40 IST)
ಬೆಂಗಳೂರು: ತಮಿಳಿನ ವಿಜಯ್ ನಾಯಕರಾಗಿರುವ ಬೀಸ್ಟ್ ಮತ್ತು ಕೆಜಿಎಫ್ 2 ಸಿನಿಮಾ ಒಂದೇ ಸಮಯದಲ್ಲಿ ಬಿಡುಗಡೆಯಾಗುತ್ತಿದೆ. ಈ ವಿಚಾರಕ್ಕೆ ಇಬ್ಬರ ಅಭಿಮಾನಿಗಳ ನಡುವೆ ವಾರ್ ಶುರುವಾಗಿದೆ. ಆದರೆ ಕೆಜಿಎಫ್ 2 ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೇಳಿದ ಮಾತು ಫ್ಯಾನ್ಸ್ ವಾರ್ ಗೆ ಕೊಂಚ ಬ್ರೇಕ್ ಹಾಕಬಹುದು.

ಕೆಜಿಎಫ್ 2 ಟ್ರೈಲರ್ ಲಾಂಚ್ ಬಳಿಕ ಮಾತನಾಡಿದ್ದ ಯಶ್, ಬೀಸ್ಟ್ ವರ್ಸಸ್ ಕೆಜಿಎಫ್ 2 ಅಲ್ಲ, ಬೀಸ್ಟ್ ಮತ್ತು ಕೆಜಿಎಫ್ 2. ವಾರ್ ಎನ್ನಲು ಇದು ಚುನಾವಣೆಯೋ, ರಾಜಕೀಯ ರಣಾಂಗಣವೋ ಅಲ್ಲ. ನಾವು ಸಿನಿಮಾ ಸ್ನೇಹಿತರು. ಒಬ್ಬರಿಗೊಬ್ಬರು ಬೆಂಬಲಿಸಬೇಕು. ನಾನು ನನ್ನ ಹಿರಿಯರಿಗೆ ಯಾವತ್ತೂ ಗೌರವ ಕೊಡುತ್ತೇನೆ. ಬೀಸ್ಟ್ ಸಿನಿಮಾವನ್ನು ನಾನೂ ನೋಡುತ್ತೇನೆ ಎಂದಿದ್ದರು.

ಯಶ್ ಅವರ ಈ ಹೇಳಿಕೆಯಿಂದ ಫ್ಯಾನ್ಸ್ ನಡುವೆ ಶುರುವಾಗಿದ್ದ ವಾರ್ ಕೊಂಚ ತಣ್ಣಗಾಗಿದೆ. ಬೀಸ್ಟ್ ಸಿನಿಮಾ ಏಪ್ರಿಲ್ 13 ರಂದು ತೆರೆಗೆ ಬರಲಿದ್ದರೆ ಕೆಜಿಎಫ್ 2 ಏಪ್ರಿಲ್ 14 ರಂದು ತೆರೆಗೆ ಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿ ಕಾಶ್ಮೀರ್ ಫೈಲ್ಸ್ ವೀಕ್ಷಿಸಿ ಅನುಪಮ್ ಖೇರ್ ಗೆ ಕರೆ ಮಾಡಿದ್ದ ಸಲ್ಮಾನ್ ಖಾನ್