ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಬಹುನಿರೀಕ್ಷಿತ್ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಟ್ರೈಲರ್ ಇಂದು ಲಾಂಚ್ ಆಗುತ್ತಿದೆ.
ಹೀಗಾಗಿ ಈ ಭಾನುವಾರ ಅಭಿಮಾನಿಗಳ ಪಾಲಿಗೆ ನಿಜಕ್ಕೂ ಧಮಾಕಾ ಆಗಲಿದೆ. ಸಂಜೆ 6.40 ಕ್ಕೆ ಹೊಂಬಾಳೆ ಫಿಲಂಸ್ ಟ್ರೈಲರ್ ರಿಲೀಸ್ ಮಾಡಲಿದೆ. ಈ ಗಳಿಗೆಯನ್ನು ಹಬ್ಬದ ರೀತಿ ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಸಿದ್ಧತತೆ ಮಾಡಿಕೊಂಡಿದ್ದಾರೆ.
ಈ ಸಿನಿಮಾದ ಟೀಸರ್ ಗೇ ದಾಖಲೆಯ ವ್ಯೂ ಬಂದಿತ್ತು. ಇದೀಗ ಟ್ರೈಲರ್ ಕೂಡಾ ಅಷ್ಟೇ ಹಿಟ್ ಆಗುವುದರಲ್ಲಿ ಸಂಶಯವಿಲ್ಲ. ಏಪ್ರಿಲ್ 14 ರಂದು ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.