Publish Date: Tue, 29 Mar 2022 (16:50 IST)
Updated Date: Tue, 29 Mar 2022 (16:52 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಐದು ತಿಂಗಳು ತುಂಬಿರುವ ಹಿನ್ನಲೆಯಲ್ಲಿ ಇಂದು ಪುನೀತ್ ಸಮಾಧಿಗೆ ದೊಡ್ಮನೆ ಕುಟುಂಬ ಭೇಟಿ ನೀಡಿ ಪೂಜೆ ಸಲ್ಲಿಸಿದೆ.
ಪುನೀತ್ ಪತ್ನಿ ಅಶ್ವಿನಿ, ಮಗಳು ವಂದಿತಾ, ರಾಘವೇಂದ್ರ ರಾಜ್ ಕುಮಾರ್, ಮಕ್ಕಳಾದ ವಿನಯ್ ಮತ್ತು ಯುವರಾಜ್ ಸೇರಿದಂತೆ ದೊಡ್ಮನೆ ಕುಟುಂಬ ಅಪ್ಪು ಸಮಾಧಿಗೆ ಭೇಟಿ ಕೊಟ್ಟಿದೆ.
ಜೊತೆಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡಾ ಈ ಸಂದರ್ಭದಲ್ಲಿ ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.