Webdunia - Bharat's app for daily news and videos

Install App

ಚಾವಾ ಸಿನಿಮಾ ಸೂಪರ್‌ಹಿಟ್‌ ಬೆನ್ನಲ್ಲೇ 2.25 ಕೋಟಿಯ ಕಾರು ಖರೀದಿಸಿದ ರಶ್ಮಿಕಾ ಮಂದಣ್ಣ

Sampriya
ಭಾನುವಾರ, 30 ಮಾರ್ಚ್ 2025 (14:36 IST)
Photo Courtesy X
ಬೆಂಗಳೂರು: ನ್ಯಾಷನಲ್‌ ಕ್ರಷ್ ರಶ್ಮಿಕಾ ಮಂದಣ್ಣ ನಟಿಸಿ, ಬಿಡುಗಡೆಯಾದ ಕಳೆದ ಮೂರು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಅದರ ಬೆನ್ನಲ್ಲೇ ದುಬಾರಿ ಕಾರನ್ನು ರಶ್ಮಿಕಾ ಖರೀದಿ ಮಾಡಿದ್ದಾರೆ.

ಕನ್ನಡದ ಕಿರಿಕ್‌ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ನಟಿಸಿರುವ ಕಳೆದ ಮೂರು ಸಿನಿಮಾಗಳು ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮೂರು ಸಾವಿರ ಕೋಟಿ ದಾಟಿವೆ. ಪುಷ್ಪಾ 2, ಅನಿಮಲ್‌ ಮತ್ತು ಚಾವಾ ಹೀಗೆ ಒಂದರ ಹಿಂದೊಂದು ಹಿಟ್ ಸಿನಿಮಾ ನೀಡಿದ ಬೆನ್ನಲ್ಲೆ ರಶ್ಮಿಕಾರ ಸಂಭಾವನೆ ಏರಿಕೆಯಾಗಿದೆ. ಅದರ ಬೆನ್ನಲ್ಲೇ ತಮಗಾಗಿ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ.

ಮರ್ಸಿಡೀಸ್ ಎಸ್ 450 ಕಾರನ್ನು ರಶ್ಮಿಕಾ ಖರೀದಿ ಮಾಡಿದ್ದಾರೆ. ಇದರ ಬೆಲೆ ಬರೋಬ್ಬರಿ 2.25 ಕೋಟಿ. ರಶ್ಮಿಕಾರ ಇಷ್ಟದ ಬಣ್ಣವಾದ ಕಪ್ಪು ಬಣ್ಣದ ಕಾರನ್ನೇ ರಶ್ಮಿಕಾ ಖರೀದಿ ಮಾಡಿದ್ದು, ಸೆಡಾನ್ ಮಾದರಿಯ ಕಾರು ಇದಾಗಿದೆ. ಈ ಐಶಾರಾಮಿ ಕಾರಿನಲ್ಲಿ ಹಲವು ಅತ್ಯುತ್ತಮ ಸೌಲಭ್ಯಗಳು, ಸೌಕರ್ಯಗಳು ಹಾಗೂ ಸೇಫ್ಟಿ ಫೀಚರ್ಸ್​ ಬರುತ್ತವೆ.  

ಈ ಕಾರಿನಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನವಿದೆ. ಆರಾಮದಾಯಕ ಪ್ರಯಾಣಕ್ಕೆ ಸೀಟ್ ರಿಕ್ಲೈನರ್, ಇನ್​ಬಿಲ್ಟ್ ಫ್ರಿಡ್ಜ್, ಹಿಂದಿನ ಸೀಟಿಗೆ ಟಿವಿ, ವಿಶಾಲವಾದ ಲೆಗ್ ರೂಂ, ಆಟೋಮ್ಯಾಟಿಕ್ ಡೋರ್​ಗಳು, ಅತ್ಯುತ್ತಮ ಭದ್ರತೆ, ಹೀಟೆಡ್, ವೆಂಟಿಲೇಟೆಡ್ ಸೀಟ್​ಗಳು ಇನ್ನೂ ಹಲವು ಅತ್ಯುತ್ತಮ ಸೌಲಭ್ಯಗಳು ಈ ಐಶಾರಾಮಿ ಕಾರಿನಲ್ಲಿದೆ.

ಕೆಲ ವರ್ಷದ ಹಿಂದಷ್ಟೆ ಕಪ್ಪು ಬಣ್ಣದ ಲ್ಯಾಂಡ್ ರೋವರ್ ಕಾರೊಂದನ್ನು ರಶ್ಮಿಕಾ ಮಂದಣ್ಣ ಖರೀದಿ ಮಾಡಿದ್ದರು. ಅದಾದ ಬಳಿಕ ಇನ್ನೋವಾ ಕ್ರಿಸ್ಟಾ ಕಾರೊಂದನ್ನು ಸಹ ಖರೀದಿ ಮಾಡಿದರು. ಒಂದು ಮಿನಿ ಕೂಪರ್ ಕಾರು ಸಹ ರಶ್ಮಿಕಾ ಮಂದಣ್ಣ ಬಳಿ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮತ್ತೇ ಒಂದಾಗುವ ನಿರ್ಧಾರ ಕೈಗೊಂಡ ಬಾಲಿವುಡ್‌ನ ಸ್ಟಾರ್ ಜೋಡಿ, ವಕೀಲರು ಹೇಳಿದ್ದೇನು

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಮುಂದಿನ ಸುದ್ದಿ
Show comments