Webdunia - Bharat's app for daily news and videos

Install App

ಬ್ಯುಸಿ ಮಧ್ಯೆಯೂ ಕೊಡಗಿಗೆ ಬಂದು ಗೆಳತಿಗೆ ಹಾರೈಸಿದ ರಶ್ಮಿಕಾ ಮಂದಣ್ಣ

Sampriya
ಮಂಗಳವಾರ, 25 ಜೂನ್ 2024 (18:07 IST)
photo Courtesy Instagram
ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದು ನ್ಯಾಶನಲ್ ಕ್ರಶ್ ಆಗಿ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ತನ್ನ ಬ್ಯುಸಿ ಸ್ಕೆಡ್ಯೂಲ್‌ನಿಂದ ಬಿಡುವು ಪಡೆದು ಕೊಡಗಿಗೆ ಬಂದಿದ್ದಾರೆ.

ವಿರಾಟಪೇಟೆಯ ರಶ್ಮಿಕಾ ಮಂದಣ್ಣ ತನ್ನ ತವರು ಕೊಡಗಿಗೆ ಆಗಮಿಸಿದ್ದು, ಕೊಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟು ತನ್ನ ಬಾಲ್ಯದ ಗೆಳತಿಯರ ಜತೆ ಫೋಟೋಗೆ ಪೋಸ್ ನೀಡಿದ್ದಾರೆ.

ಗೆಳತಿ ಯಾತ್ರಾ ದೇಚಮ್ಮಳ ಮದುವೆಗೆ ಬಂದ ನ್ಯಾಷನಲ್‌ ಕ್ರಶ್‌ ನೀಲಿ ಸೀರೆಯಲ್ಲಿ ಮಿಂಚಿದ್ದು, ಸ್ನೇಹಿತರ ಜತೆ ಕಳೆದ ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  

ಇನ್ಸ್‌ಸ್ಟಾಗ್ರಾಂನಲ್ಲಿ ಗೆಳತಿಗೆ ಶುಭಹಾರೈಸಿರುವ ರಶ್ಮಿಕಾ, "ನಾನು ಮತ್ತು ನನ್ನ ಗೆಳತಿಯರು ಯಾತ್ರಾ ದೇಚಮ್ಮಳ ಜತೆ ಬೆಳೆದೆವು. ನಿನ್ನ ಮದುವೆಯ ಈ ಕ್ಷಣ ನೀನು ಬಿಝಿ ಇದ್ದ ಕಾರಣ ನಿನ್ನ ಜತೆಗೆ ಫೋಟೋ ತೆಗೆದುಕೊಳ್ಳಲಾಗಲಿಲ್ಲ. ಈ ಮೂಲಕ ನಿನಗೆ ನಿನಗೆ ನಿನ್ನ ಸಂಗಾತಿ ಜತೆಗೆ ಅತ್ಯುತ್ತಮ ಆರೋಗ್ಯ, ಜೀವನ ಪೂರ್ತಿ ಸಂತೋಷ ದೊರಕಲಿ" ಎಂದು ರಶ್ಮಿಕಾ ಮಂದಣ್ಣ ಗೆಳತಿಗೆ ಶುಭ ಹಾರೈಸಿದ್ದಾರೆ.  

ಸದ್ಯ ರಶ್ಮಿಕಾ ನಟನೆಯ ಪುಷ್ಪಾ 2 ಸಿನಿಮಾ ರಿಲೀಸ್‌ಗೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ರಶ್ಮಿಕಾ ತೆಲುಗು, ತಮಿಳು ಹಾಗೂ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿಬಾಸ್ ಫ್ಯಾನ್ಸ್ ರಮ್ಯಾ ಕದನಕ್ಕೆ ಶಿವಣ್ಣನ ಎಂಟ್ರಿ, ಹೇಳಿದ್ದೇನು ಗೊತ್ತಾ

ಡಿ ಕಂಪನಿ ಅಲ್ಲ ಥೂ.. ಡುಬಾಕ್, ದಾವೂದ್ ಕಂಪನಿ ಅದು: ಡಿಬಾಸ್ ಫ್ಯಾನ್ಸ್ ವಿರುದ್ಧ ರೊಚ್ಚಿಗೆದ್ದ ಪ್ರಥಮ್

ರಮ್ಯಾ ಕಂಪ್ಲೇಂಟ್ ಬೆನ್ನಲ್ಲೇ ಚುರುಕಾದ ಪೊಲೀಸರು: ಡಿಬಾಸ್ ಫ್ಯಾನ್ಸ್ ಅಕೌಂಟ್ ಗೆ ಗುನ್ನ

ಸು ಫ್ರಮ್ ಸೋ ಮೂವಿ ಬಜೆಟ್ ಎಷ್ಟಿತ್ತು, ಗಳಿಸಿದ್ದೆಷ್ಟು ನೋಡಿದರೆ ಅಚ್ಚರಿಯಾಗ್ತೀರಿ

ಫಸ್ಟ್ ಟೈಂ ರಿಯಾಲಿಟಿ ಶೋ ಜಡ್ಜ್ ಆಗಿ ಅಮೂಲ್ಯ: ಬೆಸ್ಟ್ ಆಯ್ಕೆ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments