Publish Date: Thu, 24 Dec 2020 (08:50 IST)
Updated Date: Thu, 24 Dec 2020 (08:53 IST)
ಬೆಂಗಳೂರು: ಕನ್ನಡತಿ, ಪುಟ್ಟಗೌರಿ ಮದುವೆ ಧಾರವಾಹಿ ಮೂಲಕ ಮನೆ ಮಾತಾಗಿರುವ ನಟಿ ರಂಜಿನಿ ರಾಘವನ್ ಈಗ ಮತ್ತೊಂದು ಸಿನಿಮಾಗೆ ನಾಯಕಿಯಾಗಿದ್ದಾರೆ.
ಇತ್ತೀಚೆಗಷ್ಟೇ ದಿಗಂತ್ ಮಂಚಾಲೆ ಅಭಿನಯದ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದ ರಂಜಿನಿ ಈಗ ಜಯತೀರ್ಥ ನಿರ್ದೇಶನದ ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ. ಒಟ್ಟು ಐವರು ನಿರ್ದೇಶಕರು ಮಾಡುತ್ತಿರುವ ಸಿನಿಮಾದಲ್ಲಿ ಜಯತೀರ್ಥ ತಮ್ಮ ಭಾಗದ ಚಿತ್ರೀಕರಣ ನಡೆಸಿದ್ದಾರೆ. ಇದರಲ್ಲಿ ನಾಯಕರಾಗಿ ರಿಷಿ ಇದ್ದರೆ ನಾಯಕಿಯಾಗಿ ರಂಜಿನಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ.