ಬೆಂಗಳೂರು: ನಟಿ ರಮ್ಯಾ ಬಹಳ ದಿನಗಳ ನಂತರ ಮೊನ್ನೆ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದರು. ಬೀದಿ ನಾಯಿ ಲಾರಾ ಅಂತ್ಯಸಂಸ್ಕಾರಕ್ಕೆ ಬಂದಿದ್ದ ನಟಿ ರಮ್ಯಾ ಮತ್ತೆ ಸಿನಿಮಾಗೆ ಎಂಟ್ರಿ ಕೊಡುವ ಬಗ್ಗೆ ಸುಳಿವು ನೀಡಿದ್ದರು.
ಆಪರೇಷನ್ ಬಳಿಕ ದೇಹ ತೂಕ ಹೆಚ್ಚಾಗಿದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ವರ್ಕೌಟ್ ಮಾಡುತ್ತಿದ್ದೇನೆ. ಸದ್ಯಕ್ಕೆ ಕೆಲವು ಸ್ಕ್ರಿಪ್ಟ್ ಓದುತ್ತಿದ್ದೇನೆ. ಫಿಟ್ ಆದ ಬಳಿಕ ಮತ್ತೆ ಸಿನಿಮಾ ಬಗ್ಗೆ ನಿಮಗೆ ಹೊಸ ಸುದ್ದಿ ಕೊಡಲಿದ್ದೇನೆ ಎಂದಿದ್ದರು. ರಮ್ಯಾರ ಈ ಹೇಳಿಕೆ ಅವರ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿತ್ತು.
ಇದರ ಬೆನ್ನಲ್ಲೇ ರಮ್ಯಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ರೀಲ್ಸ್ ಒಂದಕ್ಕೆ ತಮ್ಮ ಗೆಳೆಯರ ಬಳಗದ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ಪ್ರಕಟಿಸಿದ್ದಾರೆ. ಬಹಳ ದಿನಗಳ ನಂತರ ರಮ್ಯಾ ಡ್ಯಾನ್ಸ್ ನೋಡಿ ಅಭಿಮಾನಿಗಳೂ ಸಖತ್ ಖುಷಿಪಟ್ಟಿದ್ದಾರೆ.