Select Your Language

Notifications

webdunia
webdunia
webdunia
webdunia

ಜೇಮ್ಸ್ ಪ್ರಿ ರಿಲೀಸ್ ಈವೆಂಟ್ ಬಗ್ಗೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿರುವ ಚಿತ್ರತಂಡ

ಪುನೀತ್ ರಾಜ್ ಕುಮಾರ್
ಬೆಂಗಳೂರು: ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಾಯಕರಾಗಿ ನಟಿಸಿದ್ದ ಜೇಮ್ಸ್ ಸಿನಿಮಾವನ್ನು ಮಾರ್ಚ್ 17 ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಎಲ್ಲಾ ಪ್ರಯತ್ನ ನಡೆಸುತ್ತಿದೆ.

ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಜೇಮ್ಸ್ ಚಿತ್ರತಂಡ, ಈ ಸಿನಿಮಾಕ್ಕೆ ವಿಶೇಷ ಪ್ರಚಾರ ಕೊಟ್ಟು ಪುನೀತ್ ಅಭಿಮಾನಿಗಳಿಗೆ ಈ ಸಿನಿಮಾವನ್ನು ಸ್ಮರಣೀಯವಾಗಿಸಲು ತಯಾರಿ ನಡೆಸಿದೆ.

ಮೂಲಗಳ ಪ್ರಕಾರ ಚಿತ್ರದ ಅಡಿಯೋ ಲಾಂಚ್ ದುಬೈನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಪ್ರಿ ರಿಲೀಸ್ ಕಾರ್ಯಕ್ರಮಗಳನ್ನು ಕರ್ನಾಟಕದ ಹಲವು ಕಡೆ ಜನರ ನಡುವೆ ನಡೆಸಲು ಯೋಜನೆ ರೂಪಿಸಲಾಗಿದೆ. ಮಾರ್ಚ್ 17 ರಂದು ಪುನೀತ್ ಬರ್ತ್ ಡೇ ದಿನವೇ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ಅಶೋಕ್ ರಾವ್ ಕ್ಯಾನ್ಸರ್ ನಿಂದ ನಿಧನ